SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 30, 2024
ಹಾಲಿನಂತೆ ಕಲ್ಮಶ ಇರದ ಜನಾಂಗ ಎಂದರೆ ಅದು ಕುರುಬ ಜನಾಂಗ ಎಂದು ಸಂಸದ ಬಿವೈ ರಾಘವೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. ಶಿವಮೊಗ್ಗದಲ್ಲಿ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಜಿಲ್ಲಾ ಕರುಬರ ಸಂಘದ ಹಾಸ್ಟೆಲ್ ಆವರಣದಲ್ಲಿ ಕನಕ ಸಭಾಭವನ ನಿರ್ಮಾಣದ ಭೂಮಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್‌ರವರು ಎಲ್ಲರ ಸಹಕಾರ ಪಡೆದು ಭವನ ನಿರ್ಮಾಣಕ್ಕೆ ಬಹಳ ಶ್ರಮ ಪಟ್ಟಿದ್ದಾರೆ. ಈ ಹಿಂದೆ ಸಹ ನಾನು ಸಹ ಕೇಂದ್ರದಿಂದ ಈ ಭವನ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ತಂದಿದ್ದೆ, ಆದರೆ ಕಾರಣಾಂತರಗಳಿಂದ ಆ ಹಣ ಬಿಡುಗಡೆಯಾಗಲಿಲ್ಲ. ಅದಕ್ಕೆ ಇಲ್ಲಿ ನಾನು ಕ್ಷಮೆ ಕೇಳುತ್ತೇನೆ ಹಾಗೆ ನಾನೂ ಈ ಬಾರಿ 50 ಲಕ್ಷ ರೂಪಾಯಿಗಳನ್ನು ಭವನ ನಿರ್ಮಾಣಕ್ಕೆ ಕೊಡುತ್ತಿದ್ದೇನೆ ಎಂದರು.
ಕನಕದಾಸರು ನೂರು ಮತಕ್ಕಿಂತ ಹಾಲು ಮತ ಶ್ರೇಷ್ಠ ಎಂದಿದ್ದಾರೆ. ಹಾಲಿನಂತೆ ಕಲ್ಮಶ ಇರದ ಜನಾಂಗವೆಂದರೆ ಅದು ಕುರುಬ ಜನಾಂಗ ಎಂದ ಸಂಸದರು ಕುರುಬ ಎಂದರೆ ಕು ಎಂದರೆ ಕುಲಗೋತ್ರ ನೋಡದವರು, ರು ಎಂದರೆ ರೂಪಾಯಿಗೂ ಆಸೆಪಡದಂತಹ, ಬ ಅಂದರೆ ಬದುಕಿನ ಬವಣೆ ಬಗೆಹರಿಸುವಂತಹ ಜನಾಂಗ ಎಂದರು

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೂ ಅಭಿನಂದನೆ ತಿಳಿಸುತ್ತಿದ್ದೇನೆ ಎಂದ ಸಂಸದರು ಯಡಿಯೂರಪ್ಪ ರವರ ಅವಧಿಯಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲು ಸರ್ಕಾರಿ ರಜೆ ನೀಡಿದ್ದರು ಎಂಬ ವಿಚಾರವನ್ನ ನೆನಪು ಮಾಡಿಕೊಂಡರು.
SUMMARY| Mp BY Raghavendra said that the kuruba community is the only community that is not as impure as milk.
KEYWORDS| Mp BY Raghavendra, kuruba community, shivamogga, kannadanews,