ಶಿಕಾರಿಪುರದಲ್ಲಿ ಶಿವಮೊಗ್ಗ CEN ಪೊಲೀಸರ ರೇಡ್‌ | ಅಣ್ಣಾನಗರದ ಓರ್ವ ಸೇರಿ ನಾಲ್ವರು ಅರೆಸ್ಟ್‌ | ಕಾರು ಬೈಕ್‌ ಜೊತೆ ಸಿಕ್ಕಿದ್ದೇನು?

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 26, 2025 ‌‌ ‌‌

ಶಿಕಾರಿಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಶಿವಮೊಗ್ಗ ಸಿಇಎನ್‌ ಠಾಣೆಯ ಪೊಲೀಸರು ರೇಡ್‌ ನಡೆಸಿ ಶಿವಮೊಗ್ಗದ ಅಣ್ಣಾನಗರದ ಓರ್ವ ಆರೋಪಿ, ಶಿಕಾರಿಪುರದ ಮೂವರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. 

ಏನಿದು ಪ್ರಕರಣ?

ಶಿಕಾರಿಪುರ ತಾಲ್ಲೂಕು ಕೆಸರಗಟ್ಟೆ ಸಮೀಪ ಮೀಸಲು ಅರಣ್ಯ ಪ್ರದೇಶವಿದೆ. ಅಲ್ಲಿ ಅನುಮಾಸ್ಪದವಾಗಿ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಅವರುಗಳು ಸ್ಥಳೀಯವಾಗಿ ಗಾಂಜಾ ಮಾರುತ್ತಿರುವ ಬಗ್ಗೆ ಶಿವಮೊಗ್ಗ ಸಿಇಎನ್‌ ಪೊಲೀಸರಿಗೆ ಮಾಹಿತಿ ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಇಎನ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕರು ಕೃಷ್ಣಮೂರ್ತಿ ನೇತೃತ್ವದ ತಂಡ ದಾಳಿ ನಡೆಸಿದೆ. 

ರೇಡ್‌ನ ವೇಳೆ 1) ಮೊಹಮ್ಮದ್ ಮುಸೇಬ್, 23 ವರ್ಷ,  ಮಲ್ಲಾಪುರ ಗ್ರಾಮ, ಶಿಕಾರಿಪುರ 2) ಹಜರತ್ ಉಸ್ಮಾನ್, 26 ವರ್ಷ,  ಮಲ್ಲಾಪುರ ಗ್ರಾಮ, ಶಿಕಾರಿಪುರ  3) ಸಲ್ಮಾನ್ ಇ, 28 ವರ್ಷ,  ಅಣ್ಣಾನಗರ 07ನೇ ಕ್ರಾಸ್, ಶಿವಮೊಗ್ಗ, 4) ಮೊಹಮ್ಮದ್ ಕೈಫ್, 21 ವರ್ಷ, ಜಟ್ಪಟ್ ನಗರ, ಶಿಕಾರಿಪುರ ಟೌನ್, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. 

ಆರೋಪಿಗಳು ಅರಣ್ಯ ಪ್ರದೇಶದಲ್ಲಿ ಗಾಂಜಾ ಮಾರುತ್ತಿದ್ದು, ಅವರಿಂದ ಬರೋಬ್ಬರಿ 70,000 ಮೌಲ್ಯದ  ರೂಗಳ 2 ಕೆಜಿ 52 ಗ್ರಾಂ ತೂಕದ ಒಣ ಗಾಂಜಾ ಜಪ್ತಿ ಮಾಡಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಡಿಜೈರ್ ಕಾರ್ ಮತ್ತು ಹೊಂಡಾ ಶೈನ್ ಬೈಕ್‌ನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು