ಶಿಕಾರಿಪುರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಧ್ಯದಲ್ಲಿಯೇ ವಿಷ ಕುಡಿಯಲು ಮುಂದಾದ ರೈತ
Farmer attempts to drink poison during protest in front of Shikaripura Taluk office

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 3, 2025
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ಪ್ರತಿಭಟನೆ ನಡೆಸ್ತಿದ್ದ ವೇಳೆ ರೈತರೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವತ್ತು ಶಿಕಾರಪುರದ ತಾಲ್ಲೂಕು ಕಚೇರಿ ಎದುರು ಈ ಘಟನೆ ನಡೆದಿದ್ದು, ರೈತರೊಬ್ಬರು ವಿಷ ಕುಡಿಯಲು ಯತ್ನಿಸುತ್ತಿರುವುದು ಗೊತ್ತಾಗುಲೇ ಅಲ್ಲಿದ್ದವರು, ರೈತರ ಕೈಯಿಂದ ವಿಷ ಬಾಟಲಿ ಕಿತ್ತುಕೊಂಡಿದ್ದಾರೆ.
ಶಿಕಾರಿಪುರ ತಾಲ್ಲೂಕು
ಕೆಪಿಟಿಸಿಎಲ್ ಈಸೂರು ಭಾಗದಲ್ಲಿ 4.5 ಕಿ.ಮೀ. ದೂರವಿರುವ ಗ್ರೀಡ್ ಗೆ 20 ಕಿ.ಮೀ. ನಿಂದ ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆ ರೂಪಿಸುತ್ತಿದೆ. ಇದು ಅವೈಜ್ಞಾನಿಕ ಎನ್ನುವುದು ರೈತರ ಆರೋಪ. ಈ ಹೈಟೆನ್ಷನ್ ವಿದ್ಯುತ್ ಮಾರ್ಗ ನಿರ್ಮಾಣ ವಿರೋಧಿಸಿ ಇವತ್ತು ಶಿಕಾರಿಪುರ ತಾಲ್ಲೂಕು ಈಸೂರು ಭಾಗದ ರೈತರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ರೈತ ಮುಖಂಡರೊಬ್ಬರು ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಹಳದಿ ಕಲರ್‌ನ ಕವರ್ ಹಿಡಿದು ಬಂದ ಕುನ್ನಜ್ಜಿ ಸುಭಾಷ್ ಎಂಬ ಹೆಸರಿನ ರೈತರೊಬ್ಬರು, ಅದರಲ್ಲಿದ್ದ ಬಾಟಲಿ ತೆಗೆದು ವಿಷ ಕುಡಿಯಲು ಯತ್ನಿಸಿದ್ದಾರೆ. ಈ ವೇಳೆ ಖುರ್ಚಿಯಲ್ಲಿ ಕುಳಿತಿದ್ದ ಮುಖಂಡರುಗಳು ತಕ್ಷಣವೇ ಅವರನ್ನ ಹಿಡಿದುಕೊಂಡು ವಿಷದ ಬಾಟಲಿ ಕಿತ್ತುಕೊಂಡರು, ಅದೇ ವೇಳೆ ಅಲ್ಲಿ ಭದ್ರತೆಗಾಗಿ ಬಂದಿದ್ದ ಪೊಲೀಸರು ಸಹ ವಿಷ ಕುಡಿಯಲು ಮುಂದಾದ ರೈತರನ್ನ ಸಮಧಾನಪಡಿಸಿ, ವಿಷದ ಬಾಟಲಿ ಬೇರೆಡೆಗೆ ತೆಗೆದುಕೊಂಡು ಹೋಗಿದ್ದಾರೆ.
ಹೇಳಿಯೇ ವಿಷ ಕುಡಿದ ರೈತ
ಪ್ರತಿಭಟನೆಯ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ ರೈತರು ತಮಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಎಲ್ಲಾ ಅವಮಾನಗಳನ್ನು ಸಹಿಸಿಕೊಳ್ಳಲಾಗದೇ ತಮ್ಮ ರೈತರೊಬ್ಬರು ವಿಷದ ಬಾಟಲಿಯನ್ನು ತಂದಿದ್ದಾರೆ ಎಂದು ಹೇಳಿದರು. ಮುಂದುವರಿದು ತಮಗೆ ಹೀಗೆ ಅನ್ಯಾಯವಾದರೆ ವಿಷ ಕುಡಿಯುವುದೆ ಸೈ ಎನ್ನುತ್ತಿರುವಾಗಲೇ ಇನ್ನೊಬ್ಬ ರೈತರು ಸಭಿಕರ ಎದುರೆ ವಿಷದ ಬಾಟಲಿ ತೆಗೆದು ಕುಡಿಯಲು ಮುಂದಾದರು ಅಷ್ಟರಲ್ಲಿ ತೀನಾ ಶ್ರೀನಿವಾಸ್ ಎದ್ದು ಬಂದ ರೈತರ ಕೈಯಲ್ಲಿದ್ದ ಬಾಟಲಿ ಕಸಿದುಕೊಂಡರು.
ಏನಿದು ವಿಚಾರ
ಶಿಕಾರಿಪುರ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವಿದ್ಯುತ್ ಗ್ರಿಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಈಸೂರು ವಿದ್ಯುತ್ ಸ್ಥಾವರದಿಂದ ನೀಲಿ ನಕ್ಷೆ ರೂಪಿಸಲಾಗಿದೆ. ಆದರೆ ಕೆಪಿಟಿಸಿಎಲ್ ಅಧಿಕಾರಿಗಳು ಕೇವಲ 4.5 ಕಿ.ಮಿ. ದೂರವಿರುವ ಗ್ರಿಡ್‌ಗೆ 20ಕಿ.ಮಿ. ದೂರಿಂದ ಸಂಪರ್ಕ ಕಲ್ಪಿಸುವ ಪ್ರಯತ್ನ ಮಾಡುತ್ತಿದೆ ಎಂಬುದು ಆರೋಪ. ಈಸೂರು, ಚುರ್ಚು ಗುಂಡಿ, ಚಿಕ್ಕಜೋಗಿಹಳ್ಳಿ ಗ್ರಾಮದ ಸರ್ವೆ ನಂಬರ್ ಜಮೀನುಗಳ ಮೂಲಕ ಈಗ ಹೈ ಟೆನ್ಶನ್ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲು ನೀಲಿ ನಕ್ಷೆ ತಯಾರು ಮಾಡಲಾಗಿದೆ. ಆ ಪ್ರದೇಶದಲ್ಲಿ ಫಸಲು ಬಿಡುವ ಅಡಕೆ ತೋಟ ಸೇರಿದಂತೆ ಇನ್ನಿತರೆ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಈಗ ಆ ಪ್ರದೇಶದಲ್ಲಿ ವಿದ್ಯುತ್ ಮಾರ್ಗ ನಿರ್ಮಾಣ ಮಾಡಿದರೆ ರೈತರು ತಮ್ಮ ಅಡಿಕೆ ತೋಟಗಳನ್ನು ಕಳೆದುಕೊಂಡು ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
View this post on Instagram
SUMMARY | Farmer attempts to drink poison during protest in front of Shikaripura Taluk office
KEY WORDS | Farmer attempts to drink poison, Shikaripura Taluk office