SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 6, 2024
ಶಿವಮೊಗ್ಗ | ಮಲೆನಾಡಿನ ಸುತ್ತಮುತ್ತ ನಡೆಯುವ ಅವಧೂತ ಚಿತ್ರಕ್ಕೆ ಮಲೆನಾಡಿನ ಭಾಗದ ಕಲಾವಿದರ ಅವಶ್ಯಕತೆ ಇದೆ ಆಸಕ್ತಿ ಇದ್ದವರು ಆಡಿಷನ್ ನೀಡಬಹುದು ಎಂದು ಅವಧೂತ ಚಿತ್ರದ ನಿರ್ದೇಶಕ ಗಂಧರ್ವ ಹೇಳಿದರು.
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಇಂದು ಅವಧೂತ ಎಂಬ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಜಾನಪದ ಕಲಾವಿದರಾದ ಟಾಕಪ್ಪರವರು ಚಿತ್ರದ ಶೀರ್ಷಿಕೆ ಅನಾವರಣವನ್ನು ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವಧೂತ ಚಿತ್ರದ ನಿರ್ದೇಶಕರಾದ ಗಂಧರ್ವರವರು ಈ ಚಿತ್ರದ ಶಿರ್ಷಿಕೆ ಯನ್ನು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಈ ಚಿತ್ರದ ಶಿರ್ಷಿಕೆಯನ್ನು ಇಲ್ಲಿ ಬಿಡುಗಡೆ ಮಾಡಲು 2 ಪ್ರಮಖ ಕಾರಣಗಳಿವೆ ಅದೇನೆಂದರೆ ಶಿವಮೊಗ್ಗ ಅನೇಕ ಸಾಹಿತಿಗಳ ಹಾಗೂ ಕವಿಗಳ ತವರೂರು 2 ನೇ ಕಾರಣ ನಮ್ಮ ಸಿನಿಮಾಗೆ ಬೇಕಾದಂಹ ವಾತಾವರಣ ಇಲ್ಲಿದೆ ಹಾಗಾಗಿ ಶಿರ್ಷಿಕೆ ಅನಾವರಣವನ್ನು ಶಿವಮೊಗ್ಗದಲ್ಲಿ ಇಟ್ಟುಕೊಂಡೆವು ಎಂದರು. ಹಾಗೆಯೇ ಇಲ್ಲಿ ನಮಗೆ 10 ರಿಂದ 12 ವರ್ಷದ ಬಾಲ ಕಲಾವಿದರು ಹಾಗೂ 28 ರಿಂದ 60 ವಯಸ್ಸಿನ ಕಲಾವಿದರ ಅವಶ್ಯಕತೆ ಇದೆ. ಈ ಸಿನಿಮಾಗೆ ಇನ್ನೂ 45 ಕಲಾವಿದರು ಬೇಕಾಗಿರುವುದರಿಂದ .ಅವರಿಗಾಗಿ ಆಡಿಷನ್ ನಡೆಸುತ್ತಿದ್ದೇವೆ. ಸದ್ಯದಲ್ಲೇ ಆಡಿಷನ್ ಬಗ್ಗೆ ಮಾಹಿತಿ ನೀಡುತ್ತೇವೆ .ಈ ಸಿನಿಮಾ ಒಬ್ಬ ಮನುಷ್ಯನ ಸುತ್ತ ನಡೆಯುವ ಕಥೆಯಾಗಿದೆ. ಈ ಚಿತ್ರದ ಶೂಟಿಂಗ್ ಜನವರಿ 25 ನಂತರ ಪ್ರಾರಂಭವಾಗುತ್ತದೆ ಎಂದರು.
ಅವಧೂತ ಸಿನಿಮಾಗೆ ಜೋಗಿಲ ಸಿದ್ಧರಾಜು ಬಂಡವಾಳ ಹೂಡುವುದರ ಜೊತೆಗೆ ಸಂಗೀತ ನಿರ್ಮಾಣ ಮಾಡುತ್ತಿದ್ದಾರೆ, ಹಾಗೆಯೇ ಸಿನಿಮಾಗೆ ಸಂಭಾಷಣೆ ಹಾಗೂ ಸಾಹಿತ್ಯವನ್ನುಹರೀಶ್ ರವರು ಬರೆದಿದ್ದಾರೆ.
SUMMARY | Gandharva, the director of Avadhoota, said that there is a need for artists from Malnad region for the film which takes place in and around Malnad and those who are interested can give auditions.
KEYWORDS | Avadhoota, auditions, kannadamovie,