SHIVAMOGGA | MALENADUTODAY NEWS | ಮಲೆನಾಡು ಟುಡೆ Feb 23, 2025

ಸುದ್ದಿ 1 | ಶಿವಮೊಗ್ಗದ ಉಂಬ್ಳೈ ಬೈಲ್ನಲ್ಲಿ ಮನೆಯೊಂದರ ಮೇಲೆ ಕಲ್ಲು ಹೊಡೆದು ಅವರನ್ನು ಮನೆಯಿಂದ ಹೊರಕ್ಕೆ ಬರುವಂತೆ ಮಾಡಿ ಗುಂಪೊಂದು ಹಲ್ಲೆ ಮಾಡಿದ ಘಟನೆ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಉಂಬ್ಳೆಬೈಲು ಲಿಂಗಾಪುರ ನಿವಾಸಿಯೊಬ್ಬರು ಮನೆಯಲ್ಲಿ ಮಲಗಿದ್ದಾಗ, ಅವರ ಮನೆ ಮೇಲೆ ಗುಂಪೊಂದು ಕಲ್ಲು ಹೊಡೆದಿದೆ. ಟಾರ್ಚ್ ಹಿಡಿದು ಪರಿಶೀಲಿಸಿದ ಕುಟುಂಬಸ್ಥರು ಆನಂತರ 112 ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಸಹ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ತೋಟದಲ್ಲಿದ್ದ ವ್ಯಕ್ತಿಯನ್ನು ಗದರಿಸಿ ಕಳುಹಿಸಿದ್ದರು. ಆನಂತರ ಪುನಃ ಮನೆ ಮೇಲೆ ಕಲ್ಲು ಬಿದ್ದ ಸೌಂಡ್ ಆಗಿ ಮನೆಯಿಂದ ಹೊರಬಂದ ಕುಟುಂಬಸ್ಥರ ಮೇಲೆ ಆರೋಪಿಗಳ ಗುಂಪು ಹಲ್ಲೆ ಮಾಡಿದೆ ಎಂದು ದೂರಲಾಗಿದೆ.
ಸುದ್ದಿ 2 | ಶಿವಮೊಗ್ಗದ ಮಹಾವೀರ ಸರ್ಕಲ್ನಲ್ಲಿ ಸಿಗ್ನಲ್ ಬಳಿ ನಿಂತಿದ್ದ ಕಾರಿಗೆ 407 ವೆಹಿಕಲ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನೊಳಗೆ ಕುಳಿತಿದ್ದವರಿಗೆ ಪೆಟ್ಟಾಗಿದೆ. ಸವಳಂಗ ಕಡೆಯಿಂದ ಬಂದಿದ್ದ ಕಾರು ಸಿಗ್ನಲ್ಬಳಿ ನಿಂತಿತ್ತು. ಇದೇ ಅದೇ ಮಾರ್ಗದಲ್ಲಿ ಬಂದಿದ್ದ 407 ವೆಹಿಕಲ್ ಬ್ರೇಕ್ ಫೇಲ್ ಆಗಿ ಮುಂದಿನ ಕಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ.
ಸುದ್ದಿ 3 | ಭದ್ರಾವತಿಯಲ್ಲಿ ಪುಂಡರ ಹಾವಳಿ ಮುಂದುವರಿದಿದೆ. ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಟೀಗೆ ಕಾಸು ಕೇಳಿದ್ದಕ್ಕೆ ಗುಂಪೊಂದು ಟೀ ಮಾರುವವನ ಪೆಟ್ಟಿಗೆ ಅಂಗಡಿ ಮೇಲೆ ಕಲ್ಲು ತೂರಿಇದೆ. ಅಲ್ಲದೆ ಅವರ ಮೇಲೆ ಹಲ್ಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದೆ. ಈ ಸಂಬಂಧ ಹಳೆನಗರ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಆಗಿದೆ. ಭದ್ರಾವತಿಯಲ್ಲಿ ಪೊಲೀಸರ ಭಯವಿಲ್ಲ ಎನ್ನುವುದಕ್ಕೆ ಈ ಪ್ರಕರಣವೂ ಮತ್ತೊಂದು ಸಾಕ್ಷಿಯಾಗಿದೆ.

ಸುದ್ದಿ 4 | ಶಿವಮೊಗ್ಗ ನಗರದ ಸೂಳೆಬೈಲ್ ಸೆಕೆಂಡ್ ಕ್ರಾಸ್ನಲ್ಲಿ ರೋಡ್ ಮಧ್ಯೆ ಕೇಕ್ ಕಟ್ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ , ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದೆ. ನೀನ್ಯಾರು ಕೇಳೋದಕ್ಕೆ ಎಂದು ಹಲ್ಲೆ ಮಾಡಿದ ಗುಂಪು, ಅವರ ಕಣ್ಣಿಗೆ ಹಾನಿ ಮಾಡಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಚಿಕಿತ್ಸೆ ಒದಗಿಸಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ
ಸುದ್ದಿ 5 | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಈಚಲಕೊಪ್ಪದ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರೊಬ್ಬರನ್ನು ಆಸ್ಪತ್ರೆಗೆ ರವಾನಿಸಲು ಮಾಜಿ ಶಾಸಕ ಹರತಾಳು ಹಾಲಪ್ಪ ನೆರವಾದರು. ಅಪಘಾತವಾದ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದ ಅವರು, ಸ್ಥಳದಲ್ಲಿ ಜನ ಇದ್ದುದ್ದನ್ನ ಗಮನಿಸಿ ಎನಾಯ್ತು ಎಂದು ವಿಚಾರಿಸಿದರು. ಆ ಬಳಿಕ 108 ಗೆ ಕರೆ ಮಾಡಿ ತಕ್ಷಣವೇ ಸ್ಥಳಕ್ಕೆ ಬರುವಂತೆ ತಿಳಿಸಿದರು. ಬಳಿಕ ತಮ್ಮವರ ಜೊತೆ ಗಾಯಗೊಂಡವರನ್ನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ಅನುಕೂಲ ಮಾಡಿಕೊಟ್ಟರು.
SUMMARY | shivamogga fast news
KEY WORDS | shivamogga fast news