ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದಿಂದ ಫೆ.16 ರಂದು ಪ್ರತಿಭಾ ಪುರಸ್ಕಾರ ಸಮಾರಂಭ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 15, 2025

ಶಿವಮೊಗ್ಗ | ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ವತಿಯಿಂದ ಅತಿ ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಫೆ.16 ರಂದು ಸಂಜೆ 6.00 ಗಂಟೆಗೆ ಶಿವಮೊಗ್ಗದ  ಶ್ರೀ ಬೆಕ್ಕಿನ ಕಲ್ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ತಿಳಿಸಿದರು.

- Advertisement -

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ಧಾರ್ಮಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಎಲ್ಲಾ ವಿಧದಲ್ಲಿ ನಮ್ಮ ಸಮಾಜ ಕೆಲಸಮಾಡಿಕೊಂಡು ಬಂದಿದೆ. ಕಳೆದ 10 ವರ್ಷದಿಂದ ಸಮಾಜದ ವತಿಯಿಂದ  ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಶೇ.95 ಕ್ಕೂ ಹೆಚ್ಚು ಅಂಕ‌ಪಡೆದವರಿಗೆ 10 ಸಾವಿರ, 90 ರಿಂದ 95 ಪ್ರತಿಶತ ಅಂಕ‌ ಪಡೆದವರಿಗೆ 6 ಸಾವಿರ ಮತ್ತು ಶೇ.60 ಕ್ಕಿಂತ ಹೆಚ್ಚು ಅಂಕ‌ಪಡೆದವರಿಗೆ ತಲಾ 5 ಸಾವಿರ ರೂ. ಪುರಸ್ಕಾರ ನೀಡಲಾಗುವುದು. ಉನ್ನತ ಶಿಕ್ಷಣ ಪಡೆದವರಿಗೆ ಶೈಕ್ಷಣಿಕ ನೆರವು‌‌ ನೀಡಲಾಗುತ್ತಿದೆ ಎಂದರು. 

ಹಾಗೆಯೇ ಈ ಬಾರಿ  ಎಸ್ ಎಸ್ ಎಲ್ ಸಿ ಯಲ್ಲಿ 65 ಜನ ಹಾಗೂ ಪಿಯುಸಿ ಯಲ್ಲಿ 75 ಜನ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹರಾಗಿದ್ದಾರೆ. ಹಾಗೆಯೇ 10 ಜನ ಎಂ.ಎ ಸ್ನಾತಕೋತ್ತರ ಪದವಿ ವಿದ್ಯಾರ್ಥಿಳಿಗೆ ಪ್ರತಿಭಾ ಪುರಸ್ಕಾರವನ್ನೂ  ಹಮ್ಮಿಕೊಂಡಿದ್ದೇವೆ ಎಂದ ಅವರು, ಉನ್ನತ ಶಿಕ್ಷಣಕ್ಕೆ ಹೋಗುವವರಿಗೆ  ನಮ್ಮ ಸಮಾಜ ಅಗತ್ಯಕ್ಕೆ ತಕ್ಕಂತೆ ಸಾಲವನ್ನು ನೀಡುತ್ತೇವೆ ಅದಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ ಎಂದರು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶಿವಮೊಗ್ಗ ಬೆಕ್ಕಿನಕಲ್ಮಠ, ಆನಂದಪುರಂನ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಶಿವಮೊಗ್ಗ ಬಸವಕೇಂದ್ರ, ಚಿಕ್ಕಮಗಳೂರು ಶ್ರಿ ಬಸವತತ್ತ್ವ ಪೀಠದ ಶ್ರೀ ಮ.ನಿ.ಪ್ರ ಡಾ. ಬಸವ ಮರುಳಸಿದ್ಧ ಸ್ವಾಮಿಗಳವರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ವಹಿಸಲಿದ್ದಾರೆ ಎಂದರು. 

ಕಾರ್ಯಕ್ರಮದಲ್ಲಿ ಮಂಗಳೂರಿನ ಆರ್.ಜೆ.  ಮ್ಯೂಸಿಕ್ ಮ್ಯಾನೇಜರ್ ಆರ್.ಜೆ. ನಯನ ಶೆಟ್ಟಿ ಅವರಿಂದ ಇಂದಿನ ಮಕ್ಕಳ ವಿಧ್ಯಾಭ್ಯಾಸ ಹಾಗೂ ಜೀವನ ಶೈಲಿ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು. 

SUMMARY | Sri Basaveshwara Veerashaiva Lingayat Samaja Seva Sangha President S.S. Jyothi Prakash said that pratibha puraskar ceremony for students will be held on Feb. 16 at 6.00 pm at Sri Bekkina Kalmatha in Shivamogga.

KEYWORDS | pratibha puraskar, Jyothi Prakash,  Bekkina Kalmatha,  

Share This Article
1 Comment

Leave a Reply

Your email address will not be published. Required fields are marked *