SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 2, 2024
ತೀರ್ಥಹಳ್ಳಿಯಲ್ಲಿ ನಡೆಯುವ ತೆಪ್ಪೋತ್ಸವ ಎಳ್ಳಮಾವಾಸ್ಯೆ ಜಾತ್ರೆಗೆ ಬಗ್ಗೆ ಮಲೆನಾಡಿಗರಿಗೆ ಎಲ್ಲವೂ ತಿಳಿದಿರುತ್ತೆ. ಆದರೆ ನಾವೀಗ ಹೇಳಲು ಹೊರಟಿರುವುದು ತೀರ್ಥಹಳ್ಳಿ ತಾಲೂಕಿನ ಮಾಳೂರಿನ ಬಳಿ ಇರುವ ಪರ್ಸಾಮಕ್ಕಿ ಎಂಬ ಒಂದು ಸ್ಥಳದಲ್ಲಿ ಪ್ರತಿ ವರ್ಷ ಎಳ್ಳಮಾವಾಸ್ಯೆ ದಿನವೆ ನಡೆಯುವ ಗುಮ್ಮನ ಮಕ್ಕಿ ಜಾತ್ರೆ ಬಗ್ಗೆ. ಈ ಬಾರಿ ಡಿಸೆಂಬರ್ 30 ರಂದು ಇಲ್ಲಿ ಎಳ್ಳಮಾವಾಸ್ಯೆ ಜಾತ್ರೆ ನಡೆಯುತ್ತಿದೆ. ಐದು ಊರಿನ ದೇವತೆಗಳ ಸಮಾಗಮದೊಂದಿಗೆ ಸಾವಿರಾರು ಜನ ಸೇರುವ ಈ ಜಾತ್ರೆಯ ಸಂಭ್ರಮವೇ ಬೇರೆ ರೀತಿಯದ್ದು
ಐದೂರಿನ ದೇವತೆಗಳ ಸಮಾಗಮ
ಈ ಜಾತ್ರೆ ಸುತ್ತ ಮುತ್ತ ಊರಿನ 5 ದೇವತೆಗಳ ಸಮಾಗಮಕ್ಕೆ ಸಾಕ್ಷಿ ಆಗುತ್ತದೆ. ಅಮ್ಮನವರ ಸಮಾಗಮ ನೋಡಲೆಂದೆ ಸಾವಿರಾರು ಜನ ಸ್ಥಳೀಯರಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುತ್ತಾರೆ. ಮಾಳೂರು ಸೀಮೆ ಗುತ್ಯಮ್ಮ ಎಡೆಹಳ್ಳಿ, ಸೋಮವಾರ ಸಂತೆ ಗುತ್ಯಮ್ಮ ಹೊಸಳ್ಳಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಸಮಕಾನಿ, ಗಾಳಿಮಾರಮ್ಮನವರು ಮಾಳೂರು ಹಾಗೂ ರಂಜದ ಕಟ್ಟೆ ಅಮ್ಮನವರು ಗುಮ್ಮನಮಕ್ಕಿಯಲ್ಲಿ ಸೇರುವ ಐದೂರು ದೇವರುಗಳು. ಇವರೆಲ್ಲಾ ಅಕ್ಕತಂಗಿಯರು ಎಂಬ ಮಾತು ಮೊದಲಿನಿಂದಲೂ ಇಲ್ಲಿದೆ. ಜಾತ್ರೆಯ ದಿನ ಮದ್ಯಾಹ್ನದ ನಂತರ ದೇವರುಗಳು ಜಾತ್ರಾ ಬಯಲಿಗೆ ಆಗಮಿಸುತ್ತವೆ. ಆ ವೇಳೆಯಲ್ಲಿ ಪಿಪಿ ಹಾಗೂ ತಮಟೆಯ ಸದ್ದಿಗೆ ದೇವರನ್ನ ಹೊತ್ತ ಪಲ್ಲಕ್ಕಿ ಕುಣಿಯುವ ವೈಭವವನ್ನು ನೋಡಲು ಕಣ್ಣುಗಳೆರಡು ಸಾಲದು.

ಅಂದಹಾಗೆ, ಅಮ್ಮನವರನ್ನೆಲ್ಲಾ ಒಟ್ಟು ಸೇರಿಸುವ ಈ ಜಾತ್ರೆಗೊಂದು ಹಿನ್ನೆಲೆಯಿದೆ. ಹಿರಿಯ ಅಕ್ಕ ಮಾಳೂರು ಸೀಮೆ ಗುತ್ಯಮ್ಮ ಎಡೆಹಳ್ಳಿ. ಎರಡನೇಯವರು ಸೋಮವಾರ ಸಂತೆ ಗುತ್ಯಮ್ಮ ಹೊಸಳ್ಳಿ ಮೂರನೆಯವರು ಗಾಳಿಮಾರಿ ಅಮ್ಮನವರು ನಾಲ್ಕನೆಯವರು ಸಮಕಾನಿ ಶ್ರೀ ದುರ್ಗ ಪರಮೇಶ್ವರಿ ಅಮ್ಮನವರು ಸಮಕಾನಿ,. ಇವರೆಲ್ಲಾ ಅಕ್ಕತಂಗಿ ಒಂದು ದಿನ ಒಟ್ಟು ಸೇರುವ ಸಂಭ್ರಮವನ್ನು ಜಾತ್ರೆ ರೂಪದಲ್ಲಿ ಆಚರಿಸಲಾಗುತ್ತಿದೆ.
ವಿಜೃಂಭಣೆಯಿಂದ ನಡೆಯುವ ಹೆದ್ದೂರು ತೆಪ್ಪೋತ್ಸವ
ತೀರ್ಥಹಳ್ಳಿ ತೆಪ್ಪೋತ್ಸವದಂತೆ ಇಲ್ಲಿಯೂ ಸಹ ತೆಪ್ಪದ ಉತ್ಸವ ಬಹಳಾ ವಿಜೃಂಭಣೆಯಿಂದ ನಡೆಯುತ್ತದೆ. ಕಳೆದ ಮುರ್ನಾಲ್ಕು ವರ್ಷಗಳಿಂದ ಹೆದ್ದೂರು ಸೇತುವೆಯಲ್ಲಿ ಸೊಮವಾರ ಸಂತೆ ಗುತ್ಯಮ್ಮ ದೇವಿಯನ್ನು ತೆಪ್ಪದ ಮೂಲಕ ತುಂಗಾ ನದಿಯಲ್ಲಿ ದಾಟಿಸಲಾಗುತ್ತದೆ, ಆ ಸಂದರ್ಭದಲ್ಲಿ ಹೆದ್ದೂರು ಸೇತುವೆಯನ್ನು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರ ಗೊಳಿಸಲಾಗುತ್ತದೆ. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಬಾನೆತ್ತರಕ್ಕೆ ಸಿಡಿಯುವ ಪಟಾಕಿಗಳು ನೋಡುಗರಿಗೆ ರೋಮಾಂಚನವನ್ನೂಂಟು ಮಾಡುತ್ತದೆ. ರಾತ್ರಿ 11 ರ ವರೆಗೆ ನಡೆಯುವ ಈ ತೆಪ್ಪೋತ್ಸವ ನೋಡಲು ಸುತ್ತ ಮುತ್ತ ಹಳ್ಳಿಗಳ ಸಾವಿರಾರು ಜನ ಸೇರುತ್ತಾರೆ
SUMMARY| Every year, on the day of Ellamasya, the Gumma Makki Fair is held at Parsamakki, a place near Malur in Thirthahalli taluk. This time, the fair is being held on 30th December. The gathering of the deities of the village adds to the charm of this fair where thousands of people gather. Read this article to know what the confluence of the deities is like and what are the specialities of this fair.
KEYWORDS| thirthahalli,thirthahalli jatre 2022,tirthahalli ellamavase jatre,tirthahalli yellamavase jatre,jatre thirthahalli,thirthahalli jatre 2023,thirtahahalli jatre,thirthahalli jathre,ellamasse jatre,thirthahalli teppotsava,thirthahalli ellamavasye,thirthahalli places,thirthahalli videis,thirthahalli new year,rameshwara temple thirthahalli,history of thirthahalli,thirthahalli drone video,tirthahalli,2023 ellamavasya jatre,thirthahalli near tourist places