SHIVAMOGGA | MALENADUTODAY NEWS | ಮಲೆನಾಡು ಟುಡೆ Dec 7, 2024
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ಸಿಗದೇ ಆಸ್ಪತ್ರೆಯ ಬಾಗಿಲಲ್ಲಿಯೇ ಮಲಗಿಸಿದ ಪ್ರಸಂಗವೊಂದು ನಡೆದಿದೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಯುವಕನೊಬ್ಬನಿಗೆ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿಲ್ಲ ಎಂಬುದು ಆರೋಪ. ಇದೇ ಕಾರಣಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ರೋಗಿಯನ್ನ ಆಸ್ಪತ್ರೆಯ ಬಾಗಿಲಲ್ಲಿ ಮಲಗಿಸಿದ್ದಾರೆ. ಆ ಬಳಿಕ ನಗರಸಭೆ ಮಾಜಿ ಸದಸ್ಯರೊಬ್ಬರು ಆಸ್ಪತ್ರೆಗೆ ಸಿಬ್ಬಂಧಿಗೆ ಕರೆ ಮಾಡಿ ಹೇಳಿ ಮೇಲೆ ಚಿಕಿತ್ಸೆ ಕೊಡಲಾಯಿತು ಎನ್ನಲಾಗಿದೆ. ಈ ಬಗ್ಗೆ ಪತ್ರಿಕೆಯೊಂದರಲ್ಲಿ ವರದಿಯಾಗಿದ್ದು, ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಅವರಿಗೆ ದೂರು ಸಹ ಸಲ್ಲಿಕೆಯಾಗಿದೆ.
SUMMARY | Bhadravathi government hospital, no treatment for patients,
KEY WORDS |Bhadravathi government hospital, no treatment for patients,
