ತಮ್ಮದೆ ನೋವಿನ ಡ್ಯಾಕ್ಯುಮೆಂಟ್ರಿಗೆ ಸಿದ್ಧವಾಗ್ತಿದ್ದಾರೆ ಶಿವರಾಜ್‌ ಕುಮಾರ್‌

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌

ನಟ ಶಿವರಾಜ್‌ ಕುಮಾರ್‌ ಕ್ಯಾನ್ಸರ್‌ನಿಂದ ಗುಣಮುಖರಾಗಿ ಬಂದಿದ್ದಾರೆ. ಇದೀಗ ಅವರು ತಾವು ಅನುಭವಿಸಿದ ನೋವು ಮತ್ತು ಅದರಿಂದ ಹೊರಬಂದ ಅನುಭವದ ಬಗ್ಗೆ ಡ್ಯಾಕ್ಯುಮೆಂಟ್ರಿ ಹೊರತರುವ ಯೋಚನೆಯಲ್ಲಿದ್ದಾರೆ. ಈ ಬಗ್ಗೆ ಸ್ಟೇಟ್‌ ಮೀಡಿಯಾವೊಂದು ವರದಿ ಮಾಡಿದೆ. ಕ್ಯಾನ್ಸರ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಶಿವಣ್ಣ ಇಂತಹದ್ದೊಂದು ಯೋಚನೆ ಮಾಡಿದ್ದಾರೆ ಎನ್ನಲಾಗಿದೆ. 

ಕಳೆದ ನಾಲ್ಕು ತಿಂಗಳಲ್ಲಿ ಶಿವರಾಜ್‌ ಕುಮಾರ್‌ರವರು ವಿದೇಶಕ್ಕೂ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಇದೀಗ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಕ್ಯಾನ್ಸರ್‌ ವಿರುದ್ಧ ಶಿವಣ್ಣ ಹೋರಾಡಿರುವ ರೀತಿಯನ್ನು ಡ್ಯಾಕ್ಯುಮೆಂಟ್ರಿ ಮಾಡುವ ಸಲಹೆ ನೀಡಿದ್ದರಂತೆ. ತಮಗೆ ಚಿಕಿತ್ಸೆ ನೀಡಿದ ವೈದ್ಯರು ನೀಡಿರುವ ಐಡಿಯಾದಂತೆ ಇದೀಗ ಶಿವಣ್ಣ ತಮ್ಮ ಅನಾರೋಗ್ಯದ ವಿರುದ್ಧದ ಹೋರಾಟವನ್ನು ಡಾಕ್ಯುಮೆಂಟರಿ ರೂಪದಲ್ಲಿ ಹೊರತರುವ ಆಲೋಚನೆಯಲ್ಲಿದ್ದಾರೆ. 

Share This Article