SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 17, 2025

ವೇಗವಾಗಿ ಬಂದ ಎರಡು ಕಾರುಗಳು ಒಂದು ಕಾರು ಹಾಗೂ ರಸ್ತೆಯ ಬದಿಯಲ್ಲಿದ್ದ ಪಾದಾಚಾರಿಗಳಿಗೆ ಡಿಕ್ಕಿ ಹೊಡೆದ ಆಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದಿದೆ. ಆ ಭಯಾನಕ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Gurugram, Haryana: Two accused, Ankit (Badshahpur) and Shiv Sundar (Shikohpur), were arrested for causing a panic-driven accident on Holi in Sector 4, damaging four vehicles. Police recovered two cars (Brezza & Swift) and identified them through CCTV footage pic.twitter.com/bjuV64NF2s
— IANS (@ians_india) March 16, 2025
ವಿಡಿಯೋದಲ್ಲಿರುವಂತೆ ಎರಡು ಕಾರುಗಳು ವೇಗವಾಗಿ ಬಂದು ಬಿಳಿ ಬಣ್ಣದ ಕಾರಿಗೆ ಡಿಕ್ಕಿ ಹೊಡೆದಿವೆ. ಅದರಲ್ಲಿ ಒಂದು ಕಾರಿನ ಮುಂಬಾಗ ಸಂಪೂರ್ಣ ನುಜುಗುಜ್ಜಾಗಿದೆ. ಆದರೆ ಇನ್ನೊಂದು ಕಾರಿನ ಚಾಲಕ ಡಿಕ್ಕಿ ಹೊಡೆದು ನಿಲ್ಲಿಸದೆ ಹಾಗೆಯೇ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬೀಕರ ಅಪಘಾತದಿಂದ ಅಲ್ಲಿದ್ದ ಸುತ್ತಮುತ್ತಲಿನ ಜನರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪಾದಾಚಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಹಿತಿ ಪಡೆದ ನಂತರ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ ಯುವಕರು ಅಪಾಯಕಾರಿ ಸಾಹಸಗಳಲ್ಲಿ ತೊಡಗಿರುವುದು ಕಂಡುಬಂದಿದೆ. ಈ ಹಿನ್ನಲೆ ಇಬ್ಬರೂ ಚಾಲಕರನ್ನು ಪೊಲೀಸರು ಬಂಧಿಸಿದರು.
SUMMARY | Two speeding cars collided with a car and pedestrians on the side of the road
KEYWORDS | cars,road, pedestrians, viral video,