ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10 2025: ರಾಜ್ಯ ವಕ್ಫ್ ಮಂಡಳಿಗೆ ಇನ್ಮುಂದೆ ಇಲ್ಲಿವರೆಗೂ ಇದ್ದಂತಹ ಅಧಿಕಾರವೊಂದು ಕೈ ತಪ್ಪಿದೆ. ಈ ಸಂಬಂಧ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ರಾಜ್ಯ ವಕ್ಫ್ ಮಂಡಳಿಗೆ ನೀಡಿದ್ದ ವಿವಾಹಿತ ಮುಸ್ಲಿಂ ದಂಪತಿಗೆ ಮದುವೆ ಪ್ರಮಾಣಪತ್ರ ನೀಡುವ ಅಧಿಕಾರವನ್ನು ನಿರ್ಧಾರದಿಂದ ರಾಜ್ಯ ಸರ್ಕಾರವು ಹಿಂದಕ್ಕೆ ಪಡೆದಿದೆ. ಈ ಸಂಬಂಧ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ವಿಚಾರದಲ್ಲಿ ಮುಸ್ಲಿಂ ವಿವಾಹಗಳನ್ನು ನೋಂದಣಿ ಮಾಡಲು ವಕ್ಫ್ ಮಂಡಳಿಗೆ ಶಾಸನಾತ್ಮಕ ಅಧಿಕಾರವಿಲ್ಲ ಅಂತಾ ಎ. ಆಲಂ ಪಾಷ ಹೈಕೋರ್ಟ್ ಮೊರೆಹೋಗಿದ್ದರು. ಅಲ್ಲದೆ ಈ ಕುರಿತಾಗಿ ಪಿಐಎಲ್ (PIL) ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನ ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ನಿನ್ನೆ ರಾಜ್ಯ ಸರ್ಕಾರ, ಮೆಮೋ ಸಲ್ಲಿಸಿದೆ. ಮೆಮೆನೊಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2023ರ ಆಗಸ್ಟ್ 30ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಂಡಿದೆ.
Waqf Board Marriage Registration Order Withdrawn
Waqf Board Marriage Registration Order Withdrawn, Karnataka Government Order Rescinded, Muslim Marriage Certificate Authority, PIL High Court Karnataka, Minority Welfare Department Order, How to register Muslim marriage in Karnataka, Waqf Board powers clarified, ವಕ್ಫ್ ವಿವಾಹ ನೋಂದಣಿ ಆದೇಶ ಹಿಂಪಡೆದ ಸರ್ಕಾರ, ರಾಜ್ಯ ಸರ್ಕಾರ ಆದೇಶ, ಮುಸ್ಲಿಂ ವಿವಾಹ ಪ್ರಮಾಣಪತ್ರ, ಹೈಕೋರ್ಟ್ ಪಿಐಎಲ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!