SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 9, 2024 mangalore news
ಪಲ್ಟಿಯಾದ ಆಟೋದ ಅಡಿಯಲ್ಲಿ ಬಿದ್ದ ತಾಯಿಯನ್ನು ರಕ್ಷಿಸಲು ಮಗಳೊಬ್ಬಳು ತನ್ನೆಲ್ಲಾ ಶ್ರಮಹಾಕಿ ಆಟೋವನ್ನೆ ಎತ್ತಿದ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದ್ದು, ದೃಶ್ಯ ಮನಕಲಕುತ್ತಿದೆ.
ಕರಾವಳಿಯ ಕಿನ್ನಿಗೋಳಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ತಮ್ಮ ಮಗಳನ್ನ ಟ್ಯೂಶನ್ನಿಂದ ಕರೆದುಕೊಂಡು ಬರಲು ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಅವರು ರಸ್ತೆ ದಾಟಲು ಮುಂದಾಗಿದ್ದಾರೆ. ಅದೇ ವೇಳೆ ಇನ್ನೊಂದು ಕಡೆಯಿಂದ ಆಟೋ ಬಂದಿದೆ. ಮಹಿಳೆ ರಸ್ತೆ ದಾಟುವುದನ್ನ ಗಮನಿಸಿ ಆಟೋ ಚಾಲಕ ಬ್ರೇಕ್ ಹಾಕಿದ್ದಾನೆ. ಆದರೆ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಷ್ಟೆ ಅಲ್ಲದೆ ರಸ್ತೆ ದಾಟುತ್ತಿದ್ದ ಮಹಿಳೆಯ ಮೇಲೆಯೇ ಕೌಚು ಬಿದ್ದಿದೆ ಆಟೋ.
ಆ ತಾಯಿಯ ಮಗಳ ಎದುರೇ ಈ ಘಟನೆ ನಡೆದಿದೆ. ಘಟನೆ ಸಂಭವಿಸುತ್ತಲೇ ಏನನ್ನೂ ಗಮನಿಸದ ಪುಟ್ಟ ಬಾಲಕಿ ನೇರವಾಗಿ ಬಂದು ತಾಯಿಗೆ ಮೇಲೆ ಬಿದ್ದಿದ್ದ ಆಟೋವನ್ನ ಎತ್ತಲು ಮುಂದಾಗಿದ್ದಾಳೆ. ಅಷ್ಟರಲ್ಲಿ ಆಟೋದೊಳಗೆ ಸಿಕ್ಕಿಬಿದ್ದವರು ಆಟೋವನ್ನ ಮೇಲಕ್ಕೆ ಎತ್ತಲು ಪ್ರಯತ್ನಿಸಿದ್ದಾರೆ. ಎಲ್ಲರ ಪ್ರಯತ್ನದಿಂದ ಆಟೋ ಮೇಲಕ್ಕೆ ಎತ್ತಲಾಯ್ತು. ಬಳಿಕ ಮಹಿಳೆಯನ್ನ ರಕ್ಷಣೆ ಮಾಡಲಾಗಿದೆ.
ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೃಶ್ಯ ಪುಟ್ಟ ಬಾಲಕಿ ತನ್ನ ತಾಯಿಯ ರಕ್ಷಣೆಗಾಗಿ ಬಾಹುಬಲಿ ರೀತಿಯಲ್ಲಿ ಆಟೋವನ್ನ ಎತ್ತಿದಂತೆ ಕಾಣುತ್ತಿದೆ.
इस बेटी को सलाम..!
????????
वरना आजकल के ज्यादातर युवा किसी दुर्घटना के समय मदद करने की बजाय वीडियो/फोटो लेने में लग जाते हैं..! pic.twitter.com/vgl2FYLRsq— Sanjay Kumar, Dy. Collector (@dc_sanjay_jas) September 8, 2024
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ