ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4 2025: ಸಿನಿ ವಲಯದಲ್ಲಿ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ನಟಿ ರಶ್ಮಿಕಾ ಮಂದಣ್ಣ ಮತ್ತು ಡಿಯರ್ ಕಾಮ್ರೇಡ್ ಹೀರೋ ವಿಜಯ್ ದೇವರಕೊಂಡ ನಡುವೆ ನಿಶ್ಚಿತಾರ್ಥ ನಡೆದಿದೆ ಎಂದು ತೆಲುಗು ಮೀಡಿಯಾಗಳು ವರದಿ ಮಾಡಿವೆ. ತೆಲುಗಿನ ವರದಿಗಳ ಪ್ರಕಾರ, ಈ ಜೋಡಿ 2026ರ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರೀಕ್ಷೆಯಿದೆಯಂತೆ . ಡೆಕ್ಕನ್ ಕ್ರಾನಿಕಲ್ ವರದಿಯ ಪ್ರಕಾರ, ಈ ಜೋಡಿಯು ಕುಟುಂಬ ಸದಸ್ಯರ ಸಮ್ಮುಖದಲ್ಲಿಯೇ ಖಾಸಗಿಯಾಗಿ ನಿಶ್ಚಿತಾರ್ಥ ಸಮಾರಂಭವನ್ನು ಮುಗಿಸಿದೆ ಎನ್ನಲಾಗಿದೆ.

ಈ ನಡುವೆ ರಶ್ಮಿಕಾ ಮಂದಣ್ಣ ಸೀರೆಯಲ್ಲಿರುವ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆ ಬಳಿಕ ಅವರ ನಿಶ್ಚಿತಾರ್ಥದ ಸುದ್ದಿ ಜೋರಾಗಿ ಹರಿದಾಡಿದೆ. ಇದೀಗ ಪತ್ರಿಕೆಗಳು ವರದಿಮಾಡಿವೆ. ಇನ್ನೂ ರಶ್ಮಿಕಾ ಮತ್ತು ವಿಜಯ್ ನಡುವೆ ರಿಲೇಶನ್ಶಿಫ್ ಇದೆ ಎಂಬ ರೂಮರ್ ಮೊದಲಿನಿಂದಲೂ ಹರಿದಾಡುತ್ತಿದೆ. ಡಿಯರ್ ಕಾಮ್ರೇಡ್’ ಮತ್ತು ‘ಗೀತಾ ಗೋವಿಂದಂ’ ಚಿತ್ರಗಳ ನಂತರವೂ ಈ ಜೋಡಿ ಹಲವೆಡೆ ಒಟ್ಟೊಟ್ಟಿಗೆ ಕಾಣಿಸಿಕೊಂಡಿತ್ತು. ಇದೀಗ ಇವರಿಬ್ಬರ ನಡುವೆ ನಿಶ್ಚಿತಾರ್ಥ ನಡೆದಿದೆ ಎನ್ನಲಾಗುತ್ತದೆ.
vijay Deverakonda and rashmika Mandanna Wedding Date 2026:
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ, ಮದುವೆ ಸುದ್ದಿ, ನಿಶ್ಚಿತಾರ್ಥ, ಫೆಬ್ರವರಿ 2026, ಡಿಯರ್ ಕಾಮ್ರೇಡ್, ಗೀತಾ ಗೋವಿಂದಂ, ಥಮ್ಮ, ಹೊಸ ಸಿನಿಮಾ, Rashmika Mandanna, Vijay Deverakonda, Wedding, Engagement, February 2026, Dear Comrade, Geetha Govindam, Thamma Movie, South Actors Marriage.
ಇದನ್ನು ಸಹ ಓದಿ : ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್ ಧರಿಸಿದ್ದ ಆಗಂತುಕ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!