Unfold in the District / ಶಿವಮೊಗ್ಗ ಜಿಲ್ಲಾ ಸುದ್ದಿಗಳು 08: ಹಲ್ಲೆ, ಸಾವು, ಮನೇಗೇನೆ ನುಗ್ಗಿ ಚಿನ್ನಾಭರಣ ಕಳ್ಳತನ – ಏನಿದು ಘಟನೆ?

ajjimane ganesh

Unfold in the District Latest news Shivamogga ಶಿವಮೊಗ್ಗ ಜಿಲ್ಲಾ ಸುದ್ದಿ: ಹಲ್ಲೆ, ಸಾವು, ಚಿನ್ನಾಭರಣ ಕಳ್ಳತನ – ಏನಿದು ಘಟನೆ?

ಹೊಸನಗರದಲ್ಲಿ ಕೊಡಚಾದ್ರಿ ಸಮಿತಿ ಅಧ್ಯಕ್ಷರ ಮೇಲೆ ಹಲ್ಲೆ

ಹೊಸನಗರ ತಾಲ್ಲೂಕಿನ ಕಟ್ಟಿನಹೊಳೆಯಲ್ಲಿ ಕೊಡಚಾದ್ರಿ ಇ.ಡಿ.ಸಿ ಸಮಿತಿಯ ಅಧ್ಯಕ್ಷರಾದ ಕೆ.ಟಿ. ಸುಬ್ರಹ್ಮಣ್ಯ ಮತ್ತು ಅವರ ಪತ್ನಿ ಮೀನಾಕ್ಷಿ ಅವರ ಮೇಲೆ ಶನಿವಾರ ರಾತ್ರಿ ಹಲ್ಲೆ ಮತ್ತು ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆಯಲ್ಲಿ ಸುಬ್ರಹ್ಮಣ್ಯ ಅವರ ತಲೆಗೆ ಗಾಯವಾಗಿದ್ದು, ತಕ್ಷಣವೇ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 

- Advertisement -

ಸುಬ್ರಹ್ಮಣ್ಯ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶನಿವಾರ ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಇಬ್ಬರು ಸಂಬಂಧಿಕರು ಅತಿಕ್ರಮವಾಗಿ ತಮ್ಮ ಮನೆಗೆ ನುಗ್ಗಿದ್ದಾರೆ ಎಂದು ಆರೋಪಿಸಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆಯೇ, ಆ ಇಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ, ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿದಿದೆ.

Unfold in the District / ರಿಪ್ಪನ್‌ಪೇಟೆ ಬಳಿ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

ರಿಪ್ಪನ್‌ಪೇಟೆ ಸಮೀಪದ ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆಯಲ್ಲಿ ಕಾಲು ಜಾರಿ ಬಿದ್ದು, 45 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕರಡಿಗ ಗ್ರಾಮದ ಬೆಳಕೋಡು ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದೆ.

ಲೋಕೇಶ್ ಅವರು ಭಾನುವಾರ ತಮ್ಮ ಪಯ ತವರುಮನೆಯಾದ ಹುಂಚದಕಟ್ಟೆಗೆ ಹೋಗಿದ್ದರು. ಬೆಳಿಗ್ಗೆ ಸೊಪ್ಪು ತರಲೆಂದು ಕಾಡಿಗೆ ತೆರಳಿದ ಅವರು, ಬಹಳ ಸಮಯದ ನಂತರವೂ ವಾಪಸ್ ಬಾರದಿದ್ದಾಗ ಕುಟುಂಬದವರು ಹುಡುಕಾಟ ಆರಂಭಿಸಿದ್ದಾರೆ. ಬಳಿಕ ಅವರ ಮೃತದೇಹ ಕೆರೆಯ ಬಳಿ ಪತ್ತೆಯಾಗಿದೆ. ಈ ಕುರಿತು ರಿಪ್ಪನ್‌ಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Unfold in the District Latest news Shivamogga ಶಿವಮೊಗ್ಗದಲ್ಲಿ ಗೃಹಿಣಿಯಿಂದ ಚಿನ್ನದ ಸರ ಕಳ್ಳತನ

ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ ಸೈಟ್ ಮಾರಾಟಕ್ಕಿದೆಯಾ ಎಂದು ಮನೆ ಬಾಗಿಲಿಗೆ ಬಂದು ಕೇಳಿ, ಬಳಿಕ ಅಲ್ಲಿನ ಗೃಹಿಣಿಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಕಸಿದು,  ಕಳ್ಳನೊಬ್ಬ ಪರಾರಿಯಾಗಿದ್ದಾನೆ 

ಸುಮಾರು 35 ವರ್ಷದ ವ್ಯಕ್ತಿಯೊಬ್ಬ ಇಲ್ಲಿನ  ನಿವಾಸಿಯೊಬ್ಬರ ಮನೆಗೆ ಬಂದು ಬಾಗಿಲು ಬಡಿದಿದ್ದಾನೆ. ಮನೆಯ ಮಾಲೀಕ ನಾಗರಾಜಪ್ಪ ಬಾಗಿಲು ತೆರೆದಾಗ, ಆ ವ್ಯಕ್ತಿ ‘ಸೈಟ್ ಮಾರಾಟಕ್ಕಿದೆಯೇ’ ಎಂದು ವಿಚಾರಿಸಿದ್ದಾನೆ. ನಾಗರಾಜಪ್ಪ ‘ಯಾವುದೇ ಸೈಟ್ ಮಾರಾಟಕ್ಕಿಲ್ಲ’ ಎಂದು ಹೇಳಿದ್ದಾರೆ. ಕೂಡಲೇ, ಆ ವ್ಯಕ್ತಿ ಮನೆಯೊಳಗೆ ನುಗ್ಗಿ, ಅನಾರೋಗ್ಯದಿಂದ ಹಾಸಿಗೆಯ ಮೇಲೆ ಮಲಗಿದ್ದ ನಾಗರಾಜಪ್ಪ ಅವರ ಪತ್ನಿ ರಾಜೇಶ್ವರಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ನಾಗರಾಜಪ್ಪ ಅವರನ್ನು ತಳ್ಳಿ, ಮನೆಯಿಂದ ಹೊರಗೆ ಹೋಗಿ ಬಾಗಿಲಿಗೆ ಚಿಲಕ ಹಾಕಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

Unfold in the District Latest news Shivamoggatoday short news
today short news

Stay updated with breaking news from Shivamogga district. Read about the assault on Kodachadri committee president in Hosanagara, a tragic drowning in Ripponpete lake, and a daring gold chain snatching incident in Shivamogga city.

Unfold in the District Latest news Shivamogga

Shivamogga news, Hosanagara attack, Kodachadri committee president, KT Subramanya, Ripponpete drowning, Hosakere lake, Lokesh death, Shivamogga gold chain snatching, Vidyanagara theft, Gold theft, Rajeshwari, Kotepolice station, Karnataka crime news, Latest news Shivamogga, Local news Shivamogga.

Share This Article
1 Comment

Leave a Reply

Your email address will not be published. Required fields are marked *