Tragedy in Soraba Couple Electrocuted Death 27 ಶಿವಮೊಗ್ಗ: ಸೊರಬದಲ್ಲಿ ವಿದ್ಯುತ್ ಶಾಕ್‌ನಿಂದ ದಂಪತಿ ಸಾವು, ಮೂವರು ಮಕ್ಕಳು ಅನಾಥ
ಶಿವಮೊಗ್ಗ, [ಜೂನ್ 27, 2025]: ಜಿಲ್ಲೆಯ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ವಿದ್ಯುತ್ ಶಾಕ್‌ಗೆ ಒಳಗಾಗಿ ದಂಪತಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಕಪ್ಪಗಳಲೆ ಗ್ರಾಮದ ಕೃಷ್ಣಪ್ಪ (55) ಮತ್ತು ಅವರ ಪತ್ನಿ ವಿನೋದ (42) ಮೃತ ದುರ್ದೈವಿಗಳು. ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ.

Tragedy in Soraba Couple Electrocuted Death 27
ಘಟನೆ ವಿವರ: ಮೃತ ದಂಪತಿ ತಮ್ಮ ಮನೆಯ ಮುಂದೆ ಬಟ್ಟೆ ಒಣಗಿಸಲು ಕಟ್ಟಿದ್ದ ಕಬ್ಬಿಣದ ತಂತಿಗೆ ವಿದ್ಯುತ್ ಶಾಕ್ ತಗುಲಿದ ಪರಿಣಾಮ ಸಾವನ್ನಪ್ಪಿದ್ದಾರೆ. ಮನೆಯ ವಿದ್ಯುತ್ ಸಂಪರ್ಕಕ್ಕಾಗಿ ಹಲವು ವೈರ್‌ಗಳು ಇಲ್ಲಿತ್ತು. ಆ ಪೈಕಿ ಮೋಟಾರ್ ಲಿಂಕ್ ಆಗಿದ್ದ ಕರೆಂಟ್ ವೈಯರ್ ಸ್ಕಿನ್ ಆಗಿದ್ದು, ಅದು ಬಟ್ಟೆ ಒಣಗಿಸುವ ತಂತಿಗೆ ತಾಗಿ ವಿದ್ಯುತ್ ಪ್ರವಹಿಸಿತ್ತು.

ಇದು ಗೊತ್ತಿರದೆ ಬಟ್ಟೆಗಳನ್ನು ತೆಗೆಯಲು ವಿನೋದಾ ನ್ಯಾಲಿಗೆ ಕೈ ಹಾಕಿದಾಗ, ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಪತ್ನಿ ಒದ್ದಾಡುವುದನ್ನು ನೋಡಿದ ಪತಿ ಕೃಷ್ಣಪ್ಪ ಅವರನ್ನು ರಕ್ಷಿಸಲು ಮುಂದಾದರು. ಈ ವೇಳೆ ಅವರಿಗೂ ವಿದ್ಯುತ್ ತಗುಲಿದ್ದು, ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದು, ಇದೀಗ ಅವರು ಅನಾಥರಾಗಿದ್ದಾರೆ. ಮೃತದೇಹಗಳನ್ನು ಸೊರಬದ ಶವಾಗಾರಕ್ಕೆ ರವಾನಿಸಲಾಗಿದೆ. ಈ ದುರಂತ ಘಟನೆ ಗ್ರಾಮದಲ್ಲಿ ಆಘಾತ ಮೂಡಿಸಿದೆ.
Tragedy in Soraba: Couple Electrocuted to Death, Three Children Orphaned in Shivamogga