today shivamogga short news august 09 ಶಿವಮೊಗ್ಗ, malenadu today news , August 06 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಇವತ್ತಿನ ಮಲೆನಾಡು ಟುಡೆ ಚಟ್ಪಟ್ ನ್ಯೂಸ್ ವಿವರ ನಿಮ್ಮ ಮುಂದೆ
ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಪೊಲೀಸರ ಎಂಟ್ರಿ!
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯುವಕರು ಜನರು ಓಡಾಡು ಸ್ಥಳದಲ್ಲಿಯೇ ಮದ್ಯಪಾನ ಮಾಡುತ್ತಿದ್ದರು. ಇದರಿಂದ ಕಿರಿಕಿರಿಗೆ ಒಳಗಾದ ಸ್ಥಳೀಯರು 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸುವಷ್ಟರಲ್ಲಿ ಸ್ಥಳದಲ್ಲಿದ್ದ ಯುವಕರು ಓಡಿ ಹೋಗಿದ್ದಾರೆ. ಆದರೆ ಈ ಪೈಕಿ ಓರ್ವ ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ದು SHO ಬಳಿ ಹಾಜರುಪಡಿಸಿ ವಿಚಾರಣೆಗೆ ಒಳಪಡಿಸಿದರು.
ಇದನ್ನು ಸಹ ಓದಿ : ಇವತ್ತಿನ ಇ-ಪೇಪರ್ನಲ್ಲಿದೆ ಇಂಟ್ರೆಸ್ಟಿಂಗ್ ಸುದ್ದಿಗಳು https://malenadutoday.com/shivamogga-e-paper-today/
ಮಗಳು ಅಳಿಯನ ಗಲಾಟೆ ಪೊಲೀಸರ ಮಧ್ಯಸ್ಥಿಕೆ
ಇತ್ತ ಸಾಗರ ತಾಲ್ಲೂಕು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಅಳಿಯ ಹಾಗು ಮಗಳ ನಡುವೆ ಗಲಾಟೆ ತಾರಕಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರ ನಡುವಿನ ಜಗಳ ನಿಲ್ಲಿಸಿ, ಬುದ್ದಿವಾದ ಹೇಳಿದ್ದಾರೆ. ಸಮಸ್ಯೆ ಜಾಸ್ತಿಯಾದರೆ ಠಾಣೆಗೆ ಬಂದು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿ, ವಿಷಯವನ್ನು ಇತ್ಯರ್ಥ ಪಡಿಸಿದರು.
ಇದನ್ನು ಸಹ ಓದಿ : ವರಮಹಾಲಕ್ಷ್ಮೀ ಹಬ್ಬ!ವೃತ ಆಚರಣೆ, ಪೂಜೆ ಹೇಗೆ? https://malenadutoday.com/celebrate-varamahalakshmi-habba-2025/
ಬಸ್ ಚಾಲಕ, ವಿದ್ಯಾರ್ಥಿಗಳ ನಡುವೆ ಕಿರಿಕ್
ಇನ್ನೂ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸುತ್ತಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕ ಹಾಗೂ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿದೆ. ಈ ವಿಷಯ ಗೊತ್ತಾಗಿ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಬಳಿಕ ಎರಡು ಕಡೆಯವರಿಗೂ ತಿಳುವಳಿಕೆ ಹೇಳಿದ್ದಷ್ಟೆ ಅಲ್ಲದೆ ಪದೇಪದೇ ಸಮಸ್ಯೆಯಾದರೆ, ಠಾಣೆಗೆ ಬನ್ನಿ ಎಂದು ಸೂಚಿಸಿ, ಪ್ರಕರಣ ಮುಕ್ತಾಯಗೊಳಿಸಿದರು.
ಇದನ್ನು ಸಹ ಓದಿ : 24 ರಂದು ಕರ್ನಾಟಕ ಸ್ಟಾರ್ ಸಿಂಗರ್ ಸೀಜನ್ 02 ಕಾರ್ಯಕ್ರಮ : ಯಾರೆಲ್ಲಾ ಭಾಗವಹಿಸಬಹುದು : ಪ್ರಥಮ ಬಹುಮಾನ ಎಷ್ಟು ಗೊತ್ತಾ? https://malenadutoday.com/karnataka-star-singer-audition-shivamogga/
today shivamogga short news august 09
ದನಕ್ಕ ಕಾರು ಡಿಕ್ಕಿ, ಪ್ರಕರಣ ಠಾಣೆಗೆ ವರ್ಗಾವಣೆ
ತೀರ್ಥಹಳ್ಳಿ ತಾಲ್ಲೂಕು ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸ್ಥಳೀಯರು ಕಾರೊಂದು ಹಸುವಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದನ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಈ ಬಗ್ಗೆ ವಿಚಾರಿಸಿ ಎಂದು ಪೊಲೀಸರಿಗೆ ಮನವಿ ಮಾಡಿದ್ದರು. ಸ್ಥಳಕ್ಕೆ ತೆರಳಿದ್ದ ಸಿಬ್ಬಂದಿ ಈ ಬಗ್ಗೆ ವಿಚಾರಣೆ ನಡೆಸಿ ವಾಹನವನ್ನು ಸ್ಟೇಷನ್ಗೆ ಶಿಫ್ಟ್ ಮಾಡಿದ್ದು, ಪ್ರಕರಣವನ್ನು ಠಾಣೆಗೆ ವರ್ಗಾವಣೆ ಮಾಡಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.