Tirthahalli Weedicide Mixed in Areca Nut Rot Medicine ಅಡಿಕೆ ತೋಟಕ್ಕೆ ಕಳೆನಾಶಕ ಮಿಶ್ರಣ: ಕಿಡಿಗೇಡಿ ಕೃತ್ಯದ ವಿರುದ್ಧ ರೈತನ ದೂರು (Weedicide Mixed in Areca Farm Medicine)
Tirthahalli Weedicide Mixed in Areca Nut Rot Medicine ತೀರ್ಥಹಳ್ಳಿ: ಮಲ್ನಾಡ್ನಲ್ಲಿ ಕೆಲವೊಮ್ಮೆ ದ್ವೇಷ ಎಷ್ಟರಮಟ್ಟಿಗೆ ಹೋಗಿ ತಲುಪುತ್ತೆ ಎಂಬುದನ್ನ ಹೇಳಲು ಅಸಾಧ್ಯ. ಇದಕ್ಕೆ ಪೂರಕವಾಗಿಬಹುದು ಎನ್ನಲಾದ ಘಟನೆಯೊಂದು ತೀರ್ಥಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ರೈತರೊಬ್ಬರು ಅಡಿಕೆ ಕೊಳೆರೋಗ (Areca Nut Rot Disease) ನಿಯಂತ್ರಿಸಲು ಅಡಿಕೆ ಮರಗಳಿಗೆ ಹೊಡೆಯಲು ಸಿದ್ಧಪಡಿಸಿಟ್ಟಿದ್ದ ಬೋರ್ಡೋ ದ್ರಾವಣದ ಡ್ರಮ್‌ಗೆ ದುಷ್ಕರ್ಮಿಗಳು ಕಳೆನಾಶಕ (Weedicide) ಬೆರೆಸಿದ್ದಾರೆ

ಈ ಬಗ್ಗೆ ಆಗುಂಬೆ (Agumbe) ಪೊಲೀಸ್ ಠಾಣೆಗೆ ಗುಡ್ಡಕೊಪ್ಪ ಗ್ರಾಮದ ರೈತರೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಈ ಕೃಷಿಕರು ತೋಟದಲ್ಲಿ ಕಳೆದ ಜುಲೈ 16 ರಂದು ಬೋರ್ಡೋ ದ್ರಾವಣವನ್ನು (Bordeaux Mixture Medicine) ಸಿದ್ಧಪಡಿಸಿಟ್ಟಿದ್ದರು. ಜುಲೈ 17 ರಂದು ಅದನ್ನು ಸಿಂಪಡಿಸಲಾಗಿತ್ತು.

ಆನಂತರ ಅಡಿಕೆ ಕಾಯಿಗಳು ಉದುರುತ್ತಿರುವ (Areca Nuts Falling) ಮತ್ತು ಹಸಿ ಹೆಡೆಯು ಒಣಗುತ್ತಿರುವ ವಿಚಾರ ಕೃಷಿಕರ ಗಮನಕ್ಕೆ ಬಂದಿದೆ. ಆನಂತರ ಇದು ಕಳೆನಾಶಕದ ದುಷ್ಪರಿಣಾಮ ಎಂಬುದು ಗೊತ್ತಾಗಿದೆ. ಹೀಗಾಗಿ ತಮಗಾದ ನಷ್ಟ ಹಾಗೂ ನಷ್ಟವೆಸಗಿದವರ ವಿರುದ್ಧ ಆಗುಂಬೆ ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ದಾರೆ. .


ತೀರ್ಥಹಳ್ಳಿ, ಅಡಿಕೆ ಕೊಳೆರೋಗ, ಕಳೆನಾಶಕ, Areca Nut Rot, Weedicide, Farmer Complaint, Agumbe Police,#FarmerProtest #CropDamage #Agriculture