Special Task Force ಶಿವಮೊಗ್ಗ, ಜುಲೈ 31, ಮಲೆನಾಡು ಟುಡೆ ಸುದ್ದಿ: ಮುಂಬರುವ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯ ಪೊಲೀಸರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕೋಮು ಗಲಾಟೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ವಿಶೇಷ ಕಾರ್ಯಪಡೆಯು ಕಾರ್ಯಾಚರಣೆ ನಡೆಸ್ತಿದೆ.
ಈ ತಂಡ ಶಿವಮೊಗ್ಗದ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾವಹಿಸಿದ್ದು, ಕೋಮು ದ್ವೇಷವನ್ನು ಹರಡುವವರ ಬಗ್ಗೆಯು ಗುಪ್ತ ಮಾಹಿತಿಗಳನ್ನು ಸಹ ಕಲೆ ಹಾಕುತ್ತಿದೆ. ವಿಶೇಷ ಕಾರ್ಯಪಡೆಯ ಕಣ್ಣಾವಲಿನ ಅಡಿಯಲ್ಲಿ ಈ ವರುಷದ ಹಬ್ಬಗಳು ನಡೆಯುತ್ತಿರುವುದು ವಿಶೇಷ.

Special Task Force
ಇನ್ನೊಂದಡೆ ಶಿವಮೊಗ್ಗ ಪೊಲೀಸ್ ಇಲಾಖೆ ಎಸ್‌ಪಿ ಮಿಥುನ್ ಕುಮಾರ್ ಸೂಚನೆಯಂತೆ ಹಲವೆಡೆ ರೂಟ್ ಮಾರ್ಚ್‌ಗಳನ್ನು ನಡೆಸ್ತಿದೆ. ಈ ರೂಟ್ ಮಾರ್ಚ್ ನಲ್ಲಿ ವಿಶೇಷ ಕಾರ್ಯಪಡೆಯ ಸಿ ಬ್ಬಂದಿಗಳು ಪಾಲ್ಗೊಳ್ಳುತ್ತಿರುವುದು ಗಮನಾರ್ಹವಾಗಿದೆ.
ಶಿಕಾರಿಪುರದಲ್ಲಿ ರೂಟ್ ಮಾರ್ಚ್
ಜುಲೈ 30, 2025 ರಂದು, ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ವಿಶೇಷ ಕಾರ್ಯಪಡೆ (Special Task Force) ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡವು ಶಿಕಾರಿಪುರ ಪಟ್ಟಣದಲ್ಲಿ ರೂಟ್ ಮಾರ್ಚ್ (Root March) ನಡೆಸಿದೆ
ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ (Sensitive Areas) ರೂಟ್ ಮಾರ್ಚ್ ನಡೆಸಿದ ಪೊಲೀಸರು, ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ, ಹಬ್ಬಗಳ ಸಮಯದಲ್ಲಿ ಶಾಂತಿಯುತ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಭರವಸೆಯಲ್ಲಿದ್ದರು.

ಪೊಲೀಸರೊಂದಿಗೆ ಸಹಕಾರಕ್ಕೆ ಅವಕಾಶ
ಇನ್ನೊಂದೆಡೆ ಶಿವಮೊಗ್ಗ ಪೊಲೀಸ್ ಇಲಾಖೆ ಹಬ್ಬಗಳ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರವನ್ನು ಪಡೆಯಲು ಮುಂದಾಗಿದೆ. ಹಿಂದಿನ ವರ್ಷದಂತೆ ಈ ವರುಷವೂ ಸಹ ಅಪರಾಧ ಹಿನ್ನೆಲೆ ಇಲ್ಲದ ಮತ್ತು ಆಸಕ್ತಿಯುಳ್ಳ ಸಾರ್ವಜನಿಕರು ಹಬ್ಬಗಳಲ್ಲಿ ಸ್ವಯಂ ಸೇವಕರು (Volunteers) ಆಗಿ ಕರ್ತವ್ಯ ನಿರ್ವಹಿಸಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಿಸಿದೆ.
ನೋಂದಣಿ ಮಾಹಿತಿ:
ಆಸಕ್ತ ಸಾರ್ವಜನಿಕರು ಆಗಸ್ಟ್ 1, 2025 ರಿಂದ ಆಗಸ್ಟ್ 15, 2025 ರವರೆಗೆ ತಮ್ಮ ವಿವರಗಳನ್ನು ಈ ಕೆಳಕಂಡ ಕಚೇರಿಗಳಲ್ಲಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು:
- ಶಿವಮೊಗ್ಗ ನಗರ ಮತ್ತು ತಾಲ್ಲೂಕು: ಶಿವಮೊಗ್ಗ-ಎ ಪೊಲೀಸ್ ಉಪಾಧೀಕ್ಷಕರ ಕಚೇರಿ
- ಭದ್ರಾವತಿ ತಾಲ್ಲೂಕು: ಭದ್ರಾವತಿ ಪೊಲೀಸ್ ಉಪಾಧೀಕ್ಷಕರ ಕಚೇರಿ
- ಸಾಗರ ತಾಲ್ಲೂಕು: ಸಾಗರ ಪೊಲೀಸ್ ಉಪಾಧೀಕ್ಷಕರ ಕಚೇರಿ
- ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕುಗಳು: ತೀರ್ಥಹಳ್ಳಿ ಪೊಲೀಸ್ ಉಪಾಧೀಕ್ಷಕರ ಕಚೇರಿ
- ಸೊರಬ ಮತ್ತು ಶಿಕಾರಿಪುರ ತಾಲ್ಲೂಕುಗಳು: ಶಿಕಾರಿಪುರ ಪೊಲೀಸ್ ಉಪಾಧೀಕ್ಷಕರ ಕಚೇರಿ
Shivamogga Police Conducts Root March, Gauri Ganesh festival, Eid Milad, Root March, public volunteers, DySP office Shivamogga, public cooperation with police, Malenadu Today News, ಶಿವಮೊಗ್ಗ ಪೊಲೀಸ್, ಗೌರಿ ಗಣೇಶ ಹಬ್ಬ, Special Task Force, law and order, police registration#PublicSafety #Shikaripura