sp peace meeting in Sunni Jamia Masjid ಶಿವಮೊಗ್ಗ, malenadu today news : August 20 2025 : ಶಿವಮೊಗ್ಗ ಪೊಲೀಸ್ ಇಲಾಖೆ ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಸರಣಿಯಾಗಿ ಶಾಂತಿ ಸಭೆಗಳನ್ನು ನಡೆಸಿಕೊಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ನಿನ್ನೆ ದಿನ ಶಿವಮೊಗ್ಗದ ಗಾಂಧಿ ಬಜಾರ್ ನ ಸುನ್ನಿ ಜಾಮಿಯಾ ಮಸೀದಿಯಲ್ಲಿ ಶಾಂತಿ ಸಭೆ ನಡೆಸಿದೆ. ಈ ಶಾಂತಿ ಸಭೆಯಲ್ಲಿ ಎಸ್ಪಿ ಮಿಥುನ್ ಕುಮಾರ್, ASP ಕಾರಿಯಪ್ಪ ಎ.ಜಿ. ಮತ್ತು ರಮೇಶ್ ಕುಮಾರ್ ಎಸ್, ಸೇರಿದಂತೆ ಜಾಮಿಯಾ ಮಸೀದಿ ಮತ್ತು ಈದ್ ಮಿಲಾದ್ ಸಮಿತಿ ಅಧ್ಯಕ್ಷರು ಹಾಗೂ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ , ಈದ್ ಮಿಲಾದ್ ಹಾಗು ಗಣಪತಿ ಹಬ್ಬ ಒಟ್ಟಿಗೆ ಬರುವುದರಿಂದ ಅನ್ಯ ಧರ್ಮೀಯರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳುವಂತೆ ತಿಳಿಸಿದರು.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಮೆರವಣಿಗೆ ದಿನ ಬದಲು
ಅಲ್ಲದೆ, ಈದ್ ಮಿಲಾದ್ ಹಾಗೂ ಗಣಪತಿ ವಿಸರ್ಜನಾ ಮೆರವಣಿಗೆಗಳು ಒಂದೇ ದಿನ ನಡೆಯುವುದರಿಂದ, ಎರಡೂ ಕಡೆಯವರೊಂದಿಗೆ ಮಾತನಾಡಿ, ಒಂದು ಮೆರವಣಿಗೆಯನ್ನು ಬೇರೊಂದು ದಿನಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು. ಸಮಾಜದಲ್ಲಿ ಶಾಂತಿ ಕದಡಲು ಕೆಲವರು ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಹರಡುವ ಸಾಧ್ಯತೆಗಳಿವೆ. ಆದ್ದರಿಂದ, ಯಾವುದೇ ಮಾಹಿತಿಯನ್ನು ಅದರ ಸತ್ಯಾಸತ್ಯತೆ ಅರಿಯದೆ ಹಂಚಬೇಡಿ ಎಚ್ಚರಿಸಿದರು.
ಇದನ್ನು ಸಹ ಓದಿ : ಇವತ್ತಿನ ದಿನಭವಿಷ್ಯ : ಆಗಸ್ಟ್ 20 ರ ಜಾತಕ ಫಲ! https://malenadutoday.com/astrological-predictions-for-today/
ಡಿಜೆ ನಿಷೇಧ
ಜಿಲ್ಲೆಯಾದ್ಯಂತ ಡಿಜೆ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈಗಾಗಲೇ 109 ಕಿಡಿಗೇಡಿಗಳ ವಿರುದ್ಧ ಗಡಿಪಾರು ಮಾಡಲಾಗಿದೆ ಎಂದ ಎಸ್ಪಿ, ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದರು. ಇನ್ನೂ ಹಬ್ಬಗಳ ಹಿನ್ನೆಲೆಯಲ್ಲಿ 1000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

#Shivamogga, #PeaceMeeting #EidMilad ,#GaneshaFestival , ಶಿವಮೊಗ್ಗ ಶಾಂತಿ ಸಭೆ, ಈದ್ ಮಿಲಾದ್,ಎಸ್.ಪಿ. ಮಿಥುನ್ ಕುಮಾರ್, ಡಿಜೆ ನಿಷೇಧ, DJ ban, social media warning,