Sp mithun kumar : ವಕ್ಫ್​ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವರ ವಿರುದ್ದ ದೂರು ದಾಖಲು 

Sp mithun kumar :  ಶಿವಮೊಗ್ಗದಲ್ಲಿ ವಕ್ಫ್ ಮಸೂದೆಯನ್ನು ವಿರೋಧಿಸಿ ಹೋರಾಟ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ವತಿಯಿಂದ ಶಾಸಕ ಎಸ್​ಎನ್​ ಚನ್ನಬಸಪ್ಪ ನೇತೃತ್ವದಲ್ಲಿ ಎಸ್​ಪಿ ಮಿಥುನ್​ ಕುಮಾರ್​ರವರಿಗೆ ಮನವಿ ಸಲ್ಲಿಸಲಾಯಿತು.

Sp mithun kumar
ಮನವಿ ಸಲ್ಲಿಸುವ ವೇಳೆ ಡಿ ಎಸ್ ಅರುಣ್​ ಸೇರಿದಂತೆ ಪ್ರಮುಖರು ಇದ್ದರು

Sp mithun kumar : ಮನವಿಯಲ್ಲಿ ಪತ್ರದಲ್ಲಿ ಏನಿದೆ

ಶಿವಮೊಗ್ಗದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆಶ್ರಯದಲ್ಲಿ ವಕ್ಫ್​ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ಆದರೆ ವಕ್ಫ್‌ ಕಾಯ್ದೆ ವಿಚಾರ ನ್ಯಾಯಾಲಯದಲ್ಲಿದ್ದು, ಪ್ರತಿಭಟನೆಗೆ ಅವಕಾಶ ಕಲ್ಪಿಸಬಾರದು ಎಂದು ಉಚ್ಚ ನ್ಯಾಯಾಲಯ ಆದೇಶಿಸಿದೆ. ಆದರೆ ಉಚ್ಛ ನ್ಯಾಯಾಲಯದ ಆದೇಶ ಧಿಕ್ಕರಿಸಿ ಸರ್ಕಾರದ ಅನುಮತಿ ಇಲ್ಲದೆ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿದೆ. ಹಾಗಾಗಿ ಪ್ರತಿಭಟನೆ ನಡೆಸಿದ ಪ್ರಮುಖರ ವಿರುದ್ಧ ಕ್ರಿಮಿನಲ್‌ ಮೊಕದಮೆ ದಾಖಲಿಸಬೇಕು ಎಂದು ಮನವಿಯನ್ನು ಸಲ್ಲಿಸಿದರು.

 

 

Leave a Comment