Soraba Honor Killing Attempt june 29 / ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ಮಗಳನ್ನು ಕೊಲ್ಲಲು ಯತ್ನಿಸಿದ ತಂದೆ! ಶಿವಮೊಗ್ಗದಲ್ಲಿ ಮರ್ಯಾದೆ ಹತ್ಯೆಗೆ ಪ್ರಯತ್ನ!

ajjimane ganesh

ಸೊರಬದಲ್ಲಿ ಆಘಾತಕಾರಿ ಘಟನೆ: ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ಮಗಳನ್ನು ಕೊಲ್ಲಲು ಯತ್ನಿಸಿದ ತಂದೆ!

ಶಿವಮೊಗ್ಗ ಜಿಲ್ಲೆಯಲ್ಲಿ ಬೆಚ್ಚಿಬೀಳುವಂತಹ ಸುದ್ದಿಯೊಂದು ಸೊರಬದಲ್ಲಿ ವರದಿಯಾಗಿದೆ. ತನ್ನ ಸ್ವಂತ ಮಗಳನ್ನು ಪೋಷಕರು ನೇಣು ಹಾಕಿ ಕೊಲ್ಲಲು ಯತ್ನಿಸಿದ ಘಟನೆಯೊಂದು ವರದಿಯಾಗಿದ್ದು ಈ ಸಂಬಂಧ ಎಫ್​ಐಅರ್ ಸಹ ದಾಖಲಾಗಿದೆ. ಇಡೀ ಪ್ರಕರಣ ಇದೀಗ ರಾಜ್ಯದಲ್ಲಿ ದೊಡ್ಡ ಮಟ್ಟದ ಗಮನ ಸೆಳೆಯುವ ಸಾಧ್ಯತೆ ಇದೆ. 

Soraba Honor Killing Attempt june 29
Soraba Honor Killing Attempt june 29

Soraba Honor Killing Attempt Pregnant

ನಡೆದಿದ್ದೇನು? 

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮೂಲದ ಕುಟುಂಬವೊಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರ ಮಗಳು 21 ವರ್ಷದಾಕೆ (ವೈಯಕ್ತಿಕ ವಿಚಾರಗಳು ಗೌಪ್ಯವಾಗಿದೆ) ಪ್ರೀತಿಸುತ್ತಿದ್ದಳು ಅಲ್ಲದೆ, ಮದುವೆಗೂ ಮೊದಲೆ ಗರ್ಭಿಣಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಪ್ರೀತಿ ಪ್ರೇಮ ಹಾಗು ಗರ್ಭಿಣಿಯಾಗಿರುವ ವಿಚಾರವನ್ನು ಒಪ್ಪಲಾಗದೇ ಪೋಷಕರು ಆಕೆಯನ್ನು ಅಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಕರೆದೊಯ್ದು, ದಾರಿ ಮಧ್ಯೆದಲ್ಲಿ ನೇಣು ಹಾಕಿ ಸಾಯಿಸಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್, ಈ ಪ್ರಯತ್ನ ಕೈಗೂಡಲಿಲ್ಲ. ಯುವತಿ ನೇಣು ಬಿಗಿದ ಬೆನ್ನಲ್ಲೆ ಆಕೆ ಮೂರ್ಚೆ ಹೋಗಿದ್ದಾಳೆ. ಹೀಗಾಗಿ ಆಕೆ ಸತ್ತಿರಬಹುದು ಎಂದು ಪೋಷಕರು ಅಲ್ಲಿಯೇ ಆಕೆಯನ್ನು ಬಿಟ್ಟು ಹೋಗಿದ್ದಾರೆ. 

- Advertisement -

Soraba Honor Killing Attempt Pregnant Daughter 28

ಆನಂತರ  ಯುವತಿಗೆ ಪ್ರಜ್ಞೆ ಬಂದಿದೆ, ತಾನಿದ್ದ ಸ್ಥಳದಿಂದ ರಸ್ತೆಯುವರೆಗೂ ಬಂದು ಜನರ ಸಹಾಯ ಕೇಳಿದ್ದಾರೆ. ಆಕೆಯ ಸ್ಥಿತಿ ಕಂಡು ಅಯ್ಯೋ ಎಂದು ಮರುಗಿದ ಮಂದಿ ಆಕೆಯನ್ನು ಮೊದಲು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ. ಇಷ್ಟೊತ್ತಿಗೆ ವಿಷಯ ತಿಳಿದ ಪೋಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿ ತನಿಖೆ ಆರಭಿಸಿದ್ದರು. 

ಸೊರಬ ತಾಲ್ಲೂಕು ಉಳವಿ ಬಳಿಯ ಕಾನಳ್ಳಿ ಎಂಬ ಪ್ರದೇಶದಲ್ಲಿರುವ ಕಣ್ಣೂರು ಅರಣ್ಯದಲ್ಲಿ ಯುವತಿಯನ್ನು ಆಕೆಯ ತಂದೆ ಹಾಗೂ ತಾಯಿ ಹತ್ಯೆಗೆ ಯತ್ನಿಸಿದ್ದರು. ಆನಂತರ ಉಳುವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಯುವತಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. 

Soraba Honor Killing Attempt Pregnant Daughter 28

Soraba honor killing, Shivamogga honor killing attempt, Father tries to kill pregnant daughter, Honor killing Karnataka, Soraba crime news, Pregnant daughter attack, Dharmanayka arrest, Meggan Hospital Shivamogga, Ulavi primary health center, Kanahalli forest incident

Share This Article
Leave a Comment

Leave a Reply

Your email address will not be published. Required fields are marked *