Snake kiran Shivamogga ಕಾಲೇಜು ಆವರಣದಲ್ಲಿದ್ದ ಬೈಕ್ನಲ್ಲಿ ಅಡಗಿ ಕುಳಿತಿತ್ತು ವಿಷಕಾರಿ ಹಾವು
ಶಿವಮೊಗ್ಗದ ಸುಬ್ಬಯ್ಯ ಇನ್ಸ್ಟಿಟ್ಯೂಟ್ ಆಪ್ ಮೆಡಿಕಲ್ ಕಾಲೇಜ್ ನ ಆವರಣದಲ್ಲಿ ನಿಲ್ಲಿಸಿದ್ದ ಸ್ಕೂಟಿ ಯೊಳಗೆ ನಾಗರ ಹಾವೊಂದು ಸೇರಿಕೊಂಡಿದ್ದು ಅದನ್ನು ಉರಗ ತಜ್ಞ ಸ್ನೇಕ್ ಕಿರಣ್ ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ.
ಕಾಲೇಜಿನ ಸಿಬ್ಬಂದಿಯೊಬ್ಬರು ನಿಲ್ಲಿಸಿದ್ದ ಬೈಕ್ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಅದನ್ನು ಗಮನಿಸಿದ ವೈದ್ಯರೊಬ್ಬರು ತಕ್ಷಣವೇ ಉರಗ ರಕ್ಷಕ ಸ್ನೇಕ್ ಕಿರಣ್ ಗೆ ಪೋನ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ಸ್ಕೂಟಿಯನ್ನು ಪರಿಶೀಲಿಸಿದ್ದಾರೆ.
ಸ್ಕೂಟಿಯೊಳಗೆ ಸೇರಿಕೊಂಡಿದ್ದ ಹಾವು ಹೊರಬರಲು ಹಿಂದೇಟು ಹಾಕಿದ್ದರಿಂದ, ಅದನ್ನು ರಕ್ಷಿಸುವುದು ಕಿರಣ್ ಗೆಸವಾಲಾಗಿ ಪರಿಣಮಿಸಿತ್ತು. ಹಾವನ್ನು ಹೊರತರುವ ಉದ್ದೇಶದಿಂದ ಸ್ನೇಕ್ ಕಿರಣ್ ಅವರು ಸ್ಕೂಟಿಯ ಡಿಕ್ಕಿ ಬಾಕ್ಸ್ ತೆರೆದು, ಸುದೀರ್ಘ ಕಾರ್ಯಾಚರಣೆಯ ನಂತರ 3 ಅಡಿಯ ನಾಗರ ಹಾವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು..
Snake kiran Shivamogga ನಂತರ ಮಾತನಾಡಿದ ಅವರು ಇಲ್ಲಿ ಜನ ಜಂಗುಳಿ ಹೆಚ್ಚಿರುವುದರಿಂದ ಭಯಗೊಂಡು ಹಾವು ಬೈಕ್ ನೊಳಗೆ ಅಡಗಿ ಕುಳಿತಿದೆ. ಅಲ್ಲದೆ ಕೆಲವೊಮ್ಮೆ ಮನೆಯಲ್ಲಿ ಬೈಕ್ ನ್ನು ನಿಲ್ಲಿಸಿದಾಗ ಅಲ್ಲಿ ಇಲಿಗಳು ಸೇರಿಕೊಳ್ಳುತ್ತವೆ. ಅವುಗಳನ್ನು ಬೇಟೆಯಾಡಲು ಹಾವುಗಳು ಬೈಕ್ ಒಳಗೆ ಸೇರಿಕೊಳ್ಳಬಹುದು. ಆದ್ದರಿಂದ ಬೈಕ್ ಓಡಿಸುವ ಮೊದಲು ಒಮ್ಮೆ ಪರಿಶೀಲಿಸುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ” ಎಂದು ತಿಳಿಸಿದರು.
