Shivamogga tunga dam : ತುಂಗಾ ಎಡ ಹಾಗೂ ಬಲದಂಡೆ ಅಚ್ಚುಕಟ್ಟುದಾರರಿಗೆ ಎಚ್ಚರಿಕೆ | ಕಾರಣವೇನು
ಶಿವಮೊಗ್ಗ : 2025-26ನೇ ಸಾಲಿನ ಮುಂಗಾರು ಬೆಳೆಗೆ ತುಂಗಾ ಎಡದಂಡೆ ನಾಲೆಗೆ ಜುಲೈ 12 ರಿಂದ ಹಾಗೂ ತುಂಗಾ ಬಲದಂಡೆ ನಾಲೆಗೆ ಜುಲೈ 15 ರಿಂದ ನೀರು ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಕರ್ನಾಟಕ ನೀರಾವರಿ ನಿಗಮ (ಕ.ನೀ.ನಿ.ನಿ.), ತುಂಗಾ ಮೇಲ್ದಂಡೆ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ನೀರು ಹರಿಸಲಾಗುವುದರಿಂದ, ಸಾರ್ವಜನಿಕರು ಮತ್ತು ರೈತರು ಜಾನುವಾರುಗಳೊಂದಿಗೆ ಯಾವುದೇ ಚಟುವಟಿಕೆಗಳನ್ನು ಮಾಡದೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.