Shivamogga Railway Station security July 2 2025
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಬಿಗಿ ಭದ್ರತಾ ತಪಾಸಣೆ! ವಿಚಾರ ಇಲ್ಲಿದೆ!
Shivamogga news / ಶಿವಮೊಗ್ಗ, ಜುಲೈ 02, 2025: ಪ್ರಯಾಣಿಕರ ಸುರಕ್ಷತೆಯ ನಿಟ್ಟಿನಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಇಂದು ಬಿಗಿ ಭದ್ರತಾ ತಪಾಸಣೆ ನಡೆಸಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಎಕ್ಸ್ ಅಕೌಂಟ್ನಲ್ಲಿ ಅಪ್ಡೇಟ್ ನೀಡಿದೆ.

ಇನ್ನು ತಪಾಸಣೆಯ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಶ್ವಾನ ದಳ (DOG SQUAD) ಮತ್ತು ಭದ್ರತಾ ಸಿಬ್ಬಂದಿ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.

ಎಲ್ಲೆಲಾ ನಡೆಯಿತು ತಪಾಸಣೆ
ರೈಲು (Trains): ನಿಲ್ದಾಣದಲ್ಲಿ ನಿಂತಿದ್ದ ಮತ್ತು ಹಾದುಹೋಗುವ ರೈಲುಗಳ ಬೋಗಿಗಳನ್ನು ಶ್ವಾನ ದಳದ ಸಹಾಯದಿಂದ ಪರಿಶೀಲಿಸಲಾಗಿದೆ.
ಪ್ಲಾಟ್‌ಫಾರ್ಮ್ (Platforms): ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳಿವೆಯೇ ಎಂದು ಪರಿಶೀಲಿಸಿದರು.
ಪ್ರಯಾಣಿಕರ ಹಾಲ್ (Hall): ಪ್ರಯಾಣಿಕರು ವಿಶ್ರಮಿಸುವ ಹಾಲ್‌ನಲ್ಲಿಯೂ ಭದ್ರತೆಯನ್ನು ಖಚಿತಪಡಿಸಿಕೊಳ್ಳಲಾಯಿತು.
ಪಾರ್ಸೆಲ್ ಕಚೇರಿ (Parcel Office): ಪಾರ್ಸೆಲ್‌ಗಳಿರುವ ಪ್ರದೇಶ ಮತ್ತು ಕಚೇರಿಯನ್ನು ಪರಿಶೀಲಿಸಲಾಯಿತು.
ಇದಷ್ಟೆ ಅಲ್ಲದೆ ವಾಹನ ನಿಲುಗಡೆ ಪ್ರದೇಶ, ವಸ್ತುಗಳನ್ನು ಇಟ್ಟಿರುವ ಪ್ರದೇಶವೂ ಸೇರಿದಂತೆ ಪ್ರಯಾಣಿಕರ ಬಾಗೇಜ್ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಓದುತ್ತೀರಿ : ಮಲೆನಾಡು ಟುಡೆ
Shivamogga Railway Station security July 2 2025
ಸುರಕ್ಷತೆಯ ದೃಷ್ಟಿಯಿಂದ
ದಿನಾಂಕ: 02-07-2025ರಂದು ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿದ್ದ ರೈಲುಗಾಡಿಗಳು, Platform, Booking Office, Hall & Parcel Office & Parking Area ಗಳಲ್ಲಿ DOG SQUAD ನಿಂದ ASC Check ಮಾಡಿಸಿರುತ್ತಾರೆ. @KarnatakaCops @rpfswr @Shivamogga_SP pic.twitter.com/YMspc6sAIh— Government Railway Police Karnataka (@KARailwayPolice) July 2, 2025