ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 26 2025 : ಶಿವಮೊಗ್ಗ 112 ಪೊಲೀಸರು ಮತ್ತೊಮ್ಮೆ ಕಮಾಲ್ ಮಾಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸ್ತಿದ್ದ ವ್ಯಕ್ತಿಯೊಬ್ಬನ ಮನವೊಲಿಸಿ ಆತನನ್ನು ಉಳಿಸಿದ್ದಾರೆ. ಈ ಬಗ್ಗೆ ಸ್ವತಃ ಎಸ್ಪಿಯುವರು ಮಾಹಿತಿ ಹಂಚಿಕೊಂಡು ತಮ್ಮ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ನಡೆದಿದ್ದೇನು?: ನಿನ್ನೆ ದಿನ ಅಂದೆ ಸೆಪ್ಟೆಂಬರ್ 25ರ ರಾತ್ರಿ ಆಲ್ಕೊಳದಲ್ಲಿ ನಡೆದ ಘಟನೆ ಇದು. ಇಲ್ಲಿ ನಿವಾಸಿಯೊಬ್ಬರು ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಸಂಬಂಧಿಕರಿಗೆ ವಿಡಿಯೋ ಕರೆ ಮೂಲಕ ತಿಳಿಸಿದ್ದರು. ಆನಂತರ, ಆತನ ಸಂಬಂಧಿಕರು ತಕ್ಷಣವೇ ERSS 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಹಾಗಾಗಿ ತಕ್ಷಣವೇ ಸ್ಥಳಕ್ಕೆ ತೆರಳಿದ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದವನನ್ನು ರಕ್ಷಣೆಮಾಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ವಿನೋಬನಗರ ಪೊಲೀಸ್ ಠಾಣೆಯ ಸಿಹೆಚ್‌ಸಿ ಜಗದೀಶ್ ಮತ್ತು ಚಾಲಕ ಮಂಜುನಾಥ್ ಅವರು ಮನೆಯ ಬಾಗಿಲು ತೆರೆದು ಒಳ ನುಗ್ಗಿದರು. ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ವ್ಯಕ್ತಿಯ ಮನವೊಲಿಸಿ, ಧೈರ್ಯ ತುಂಬುವ ಮೂಲಕ ಆತನ ಜೀವಕ್ಕೆ ಯಾವುದೇ ಹಾನಿಯಾಗದಂತೆ ರಕ್ಷಿಸಿದ್ದಾರೆ. ಈ ಪೊಲೀಸ್ ಸಿಬ್ಬಂದಿಯಷ್ಟೆ ಅಲ್ಲದೆ
ತುಂಗಾ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಿಪಿಸಿ ಪ್ರಭು ಮತ್ತು ಕಿರಣ್ ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ಸಿಬ್ಬಂದಿಯ ಈ ಕಾರ್ಯವನ್ನು ಮೆಚ್ಚಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ. ಕೆ ಐ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಅಭಿನಂದಿಸಿದ್ದಾರೆ.

ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga Police Officers Praised for Saving Man’s Life from Suicide Attempt
