ಗೋಡೆಗೆ ಪೇಯಿಂಟ್ ಮಾಡುತ್ತಿದ್ದ ಕಾರ್ಮಿಕ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ನವುಲೆಯಲ್ಲಿ ನಡೆದಿದೆ. ಉಮೇಶ್ (30) ಸಾವನ್ನಪ್ಪಿರುವ ಕಾರ್ಮಿಕನಾಗಿದ್ದಾನೆ.
shivamogga news : ಹೇಗಾಯ್ತು ಘಟನೆ
ಉಮೇಶ್ ಸವಳಂಗ ರಸ್ತೆಯಲ್ಲಿರುವ ನವುಲೆಯಲ್ಲಿ ನಾಗೇಶ್ ಎಂಬುವವರ ಮನೆಗೆ ಪೇಯಿಂಟ್ ಹೊಡೆಯಲು ಕಟ್ಟಡವನ್ನು ಏರಿದ್ದರು. ಕಟ್ಟಡವನ್ನು ಏರಿ ಪೇಯಿಂಟ್ ಹೊಡೆಯುತ್ತಿದ್ದಾಗ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಸಹ ಅದರೊಳಗೆ ಉಮೇಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.