ಶಿವಮೊಗ್ಗ ನಗರದ ಸೂಳೆಬೈಲು ಸಮೀಪ ಇರುವ ದಾನಾ ಪ್ಯಾಲೇಸ್‌ನಲ್ಲಿ ಮದುವೆ ಸಮಾರಂಭಕ್ಕೆಂದು ಬಂದಿದ್ದ ವ್ಯಕ್ತಿಯೊಬ್ಬರಿಗೆ ಆಘಾತ ಎದುರಾಗಿದೆ. ಮದುವೆ ಮುಗಿಸಿಕೊಂಡು ಹೊರಬರುತ್ತಿದ್ದಂತೆ ಹಾಲ್‌ನ ಎದುರುಗಡೆ ನಿಲ್ಲಿಸಿದ್ದ ಅವರ ಬೈಕ್ನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ದೂರುದಾರರು ತಮ್ಮ ಆತ್ಮೀಯರ ಮದುವೆಗೆ ದಾನಾ ಪ್ಯಾಲೇಸ್‌ಗೆ ಆಗಮಿಸಿದ್ದರು. ಅವರು ತಮ್ಮ ಹೀರೋ ಹೋಂಡಾ ಬೈಕನ್ನು ಹಾಲ್ ಎದುರಿನಲ್ಲಿ ನಿಲ್ಲಿಸಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿಸಿ ಹೊರಬಂದಾಗ, ತಾವು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ತಕ್ಷಣವೇ ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
- Advertisement -
Shivamogga news today
TAGGED:Shivamogga news today

