SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 3, 2024 | SHIVAMOGGA NEWS |
ಮಾಜಿ ಗೃಹಸಚಿವರ ಸಹೋದರಿ ವಿಧಿವಶ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಶಾಸಕ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರ ಸಹೋದರಿ ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 70 ವರ್ಷ ವಯಸ್ಸಾಗಿತ್ತು. ಅರಳಸುರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋದೂರು ನಿವಾಸಿಯಾಗಿ ನೀಲಮ್ಮ ಶಂಕರಪ್ಪ (70) ಅನಾರೋಗ್ಯದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಇತ್ತೀಚೆಗೆ ಅಡ್ಮಿಟ್ ಆಗಿದ್ದರು
ಕೂಡಲಿಯಲ್ಲಿ ಮುಳುಗಿ ಯುವಕ ಸಾವು
ಮಹಾಲಯ ಅಮಾವಾಸ್ಯೆ ಪ್ರಯುಕ್ತ ಹಿರಿಯರಿಗೆ ಎಡೆ ಇಟ್ಟು ಪೂಜೆ ಮಾಡಲು ಬಂದಿದ್ದ ವೇಳೆ ನೀರಿಗಿಳಿದಿದ್ದ ಯುವಕನೊಬ್ಬ ಕೂಡಲಿಯಲ್ಲಿ ನೀರುಪಾಲಾಗಿದ್ದಾರೆ.ಅವರನ್ನ ಹರ್ಷಿ ಎಂದು ಗುರುತಿಸಲಾಗಿದೆ. ಇವರು ಹೊಳಲ್ಕೆರೆಯಿಂದ ಬಂದಿದ್ದರು, ಸದ್ಯ ಅವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಹುಡುಕಾಟ ನಡೆಸ್ತಿದ್ದಾರೆ.
ಡಾಕ್ಟರ್ ನಾಪತ್ತೆ
ಮೆಗ್ಗಾನ್ ಆಸ್ಪತ್ರೆಯಲ್ಲಿ ಜ್ಯೂನಿಯರ್ ಡಾಕ್ಟರ್ ಆಗಿದ್ದ ಮಲ್ಲಿಕಾರ್ಜುನ್ ಎಂಬವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ. ಕೆಲಸದ ವಿಚಾರದಲ್ಲಿ ಇದ್ದ ಗೊಂದಲಗಳನ್ನ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಓಡಾಡುತ್ತಿದ್ದ ಡಾಕ್ಟರ್ ಮಲ್ಲಿಕಾರ್ಜುನ್ ರವರ ನಾಪತ್ತೆ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.