SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 16, 2024
ವಿನಾನಯಕನಿಗೆ ಮುಸ್ಲಿಮರ ಹಾರ
ಶಿವಮೊಗ್ಗದ ಸೀಗೇಹಟ್ಟಿಯಲ್ಲಿ ಗಣಪತಿಗೆ ಇಮಾಮ್ ಬಾಡಾದ ಮುಸ್ಲಿಮ್ ಮುಖಂಡರು ಹಾರ ಹಾಕಿ ಸೌಹಾರ್ಧತೆ ಮರೆದಿದ್ದರು. ಇದೇ ರೀತಿಯಲ್ಲಿ ನಿನ್ನೆ ದಿನ ಸೂಳೇಬೈಲಿನಲ್ಲಿ ದುರ್ಗಾಂಬ ದೇವಸ್ಥಾನದಲ್ಲಿ ಪ್ರತಿಷ್ಟಾಪನೆ ಮಾಡಲಾಗಿದ್ದ ಮಾರುತಿ ಮಲ್ಲೇಶ್ವರ ಯುವಕರ ಸಂಘದ ಗಣಪತಿಗೆ ಸ್ಥಳೀಯ ಮಸೀದಿ ಮುಖಂಡರು ಹಾರಹಾಕಿದ್ದಾರೆ. ಮಸೀದಿಯ ಬಳಿ ಗಣಪತಿ ಬರುತ್ತಲೇ ವಿನಾಯಕನಿಗೆ ಹಾರ ಸಲ್ಲಿಸಿ ಬಾವೈಕತ್ಯೆ ಮೆರೆದಿದ್ಧಾರೆ.
ಮಲವಗೊಪ್ಪದಲ್ಲಿ ಅಪಘಾತ ಮಹಿಳೆ ಸಾವು
ಶಿವಮೊಗ್ಗ ನಗರದ ಹೊರವಲಯ ಮಲವಗೊಪ್ಪದಲ್ಲಿ ಹಾಲಿನ ವಾಹನವೊಂದು ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮಾಚೇನಹಳ್ಳಿ ಕಡೆಯಿಂದ ಬರುತ್ತಿದ್ದ ಶಿಮುಲ್‌ನ ಹಾಲಿನ ವ್ಯಾನ್ ಮಲವಗೊಪ್ಪದ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಡಿಕ್ಕಿಯಾಗಿದೆ. ಪರಿಣಾಮ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಆ ಬಳಿಕ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಸಾವನ್ನಪ್ಪಿದ್ದಾರೆ.
ಗಣಪತಿ ವಿಸರ್ಜನೆ ವೇಳೆ ಕಿರಿಕ್
ಶಿವಮೊಗ್ಗದ ಸಂತೇಕಡೂರುನಲ್ಲಿ ಗಣಪತಿ ರಾಜಬೀದಿ ಉತ್ಸವದ ವೇಳೆ ವೈಯಕ್ತಿಕ ವೈಷಮ್ಯದಿಂದ ಓರ್ವನ ಮೇಲೆ ಹಲ್ಲೆ ಮಾಡಿದ್ದಷ್ಟೆ ಅಲ್ಲದೆ ಮರುದಿನ ಆತನ ಮೇಲೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಎಫ್‌ಐಆರ್ ಸಹ ದರ್ಜ್ ಆಗಿದೆ. ಹೊಡೆದಾಟ ನಡೆದಿದ್ದು, ಇದರ ಮುಂದುವರೆದ ಭಾಘವಾ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ