ಶಿವಮೊಗ್ಗದಲ್ಲಿ ಗಾಂಜಾ ಬೇಟೆ: 1.2 ಕೆ.ಜಿ. ಗಾಂಜಾ ವಶ, ಓರ್ವನ ಬಂಧನ /Shivamogga Drug Bust1.2 KG Ganja Seized One Arrested
Shivamogga news / ಶಿವಮೊಗ್ಗ, ಜುಲೈ 1, 2025: ಜಿಲ್ಲೆಯ ಸಿಇಎನ್ ಠಾಣೆ ಪೊಲೀಸರು ಕಾರ್ಯಾಚರಣೆ ಒಂದರಲ್ಲಿ ಸುಮಾರು 1 ಕೆ.ಜಿ. 219 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಈತ ತ್ಯಾವರೆ ಚಟ್ನಳ್ಳಿ ಸಮೀಪ ಲೇಕ್ ವ್ಯೂ ರೆಸಿಡೆನ್ಸಿಗೆ ಹೋಗುವ ಹಾದಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲಸರಿಗೆ ವರ್ತಮಾನವೊಂಧು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ರವರ ನೇತೃತ್ವದಲ್ಲಿ, ಸಿಬ್ಬಂಧಿಗಳಾದ ಎಎಸ್ಐ ಶೇಖರ್, ಹೆಚ್‌ಸಿಗಳಾದ ಕರಿಬಸಪ್ಪ ಬಿ.ಎಸ್, ಧರ್ಮಾ ನಾಯ್ಕ, ಅವನಾಶ, ಚಂದ್ರಶೇಖರ್ ಡಿ.ಆರ್, ಹಾಗೂ ಪಿಸಿಗಳಾದ ಗಿರೀಶ್ ಸ್ವಾಮಿ ಬಿ.ಹೆಚ್, ನಾರಾಯಣ ಸ್ವಾಮಿ, ಪಿರ್ ದೊಸ್ ಅಹಮದ್, ರವಿ ಬಿ, ಆಂಡ್ರ್ಯೂಸ್ ಜೊನ್ಸ್, ಮತ್ತು ಪ್ರಮೋದ್ ಎಲ್.ಬಿ. ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.

Shivamogga Drug Bust1.2 KG Ganja Seized
ಸ್ಥಳಕ್ಕೆ ಹೋಗಿ ರೇಡ್ ಮಾಡಿದ ಪೊಲೀಸ್ ಅಧಿಕಾರಿಗಳ ತಂಡ ಒಂದು ಎನ್ಫೀಲ್ಡ್ ಸೇರಿದಂತೆ ಮಹಮ್ಮದ್ ಜಮೀರ್ ಅಹಮ್ಮದ್ (33 ವರ್ಷ, ಡ್ರೈವರ್ ಕೆಲಸ, ವಾಸ 4 ನೇ ತಿರುವು, ಟಿಪ್ಪುನಗರ, ಚನ್ನಗಿರಿ, ದಾವಣಗೆರೆ ಜಿಲ್ಲೆ) ಎಂಬಾತನನ್ನು ದಸ್ತಗಿರಿ ಮಾಡಿದೆ. ಆರೋಪಿಯ ವಿರುದ್ಧ ಕಲಂ 20(b)(ii)(B) NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Tyavarechattnahalli drug raid
, Lake View Residency Shivamogga crime
, Shivamogga SP
, cannabis confiscation Shivamogga
, Royal Enfield seized drug case
, Channagiri Davangere drug arrest
, Shivamogga police news July 2025
, drug trafficking Karnataka
Shivamogga Drug Bust1.2 KG Ganja Seized