shivamogga court justice / Malnad news/ shivamogga : ಭದ್ರಾವತಿ (Bhadravati) ತಾಲ್ಲೂಕಿನಲ್ಲಿ 2024 ರಲ್ಲಿ ನಡೆದ ಪೋಕ್ಸೋ (POCSO) ಪ್ರಕರಣವೊಂದರಲ್ಲಿ, ಶಿವಮೊಗ್ಗ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ ಮತ್ತು ₹1,61,000 ದಂಡ ವಿಧಿಸಿ ತೀರ್ಪು ನೀಡಿದೆ.
shivamogga court justice ಘಟನೆಯ ವಿವರ
2024ರಲ್ಲಿ ಭದ್ರಾವತಿ ಠಾಣೆ ಒಂದರ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ಈ ಭಾಗದ ಅಪ್ರಾಪ್ತೆಯೊಬ್ಬರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯ (sexual assault) ದ ಬಗ್ಗೆ ದೂರು ದಾಖಲಿಸಿದ್ದರು. ಆನಂತರ (IPC) ಕಲಂ 448, 376(2)(ಎನ್), 376(2)(ಎಫ್) ಹಾಗೂ ಪೋಕ್ಸೋ ಕಾಯ್ದೆಯ ಕಲಂ 5(ಜೆ)(2), 5(ಎಲ್), 6 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನ ಸಿಪಿಐ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು
ಈ ಸಂಬಂಧ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ರಲ್ಲಿ ವಿಚಾರಣೆ ನಡೆದಿತ್ತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಧರ್ ಹೆಚ್. ಆರ್. ವಾದ ಮಾಡಿದ್ದರು. ಪ್ರಕರಣದ ವಿಚಾರಣೆ ಮುಗಿದು, ವಿಚಾರಣೆ ವೇಳೆಯಲ್ಲಿ ಆರೋಪ ಸಾಬೀತಾಗಿದೆ. ಹೀಗಾಗಿ ನ್ಯಾಯಾಧೀಶರಾದ ನಿಂಗನಗೌಡ ಬಿ. ಪಾಟೀಲ್ ಅವರು ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹1,61,000 ದಂಡ ವಿಧಿಸಿ ಆದೇಶ ನೀಡಿದ್ದಾರೆ.

Man Gets 20 Years Imprisonment , ನ್ಯಾಯಾಲಯದ ತೀರ್ಪು, ಶಿವಮೊಗ್ಗ ಕೋರ್ಟ್, #Bhadravati #JusticeForMinor,