SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 10, 2024
ಶಿವಮೊಗ್ಗದಲ್ಲಿ ನಿನ್ನೆ ದಿನ ನಡೆದ ವಿವಿಧ ಘಟನೆಗಳು ಹಾಗೂ ಸುದ್ದಿಗಳ ಒಟ್ಟಾರೆ ಸಂಕ್ಷಿಪ್ತ ರೂಪದ ವಿವರ ಮಲೆನಾಡು ಟುಡೆಯ ಈ ರಿಪೋರ್ಟ್
ತಮಟೆ ಚಳುವಳಿಗೆ ಕರೆ
ಪರಿಶಿಷ್ಟಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನ ಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಸಂಬಂಧ ಶಿವಮೊಗ್ಗ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಸರ್ಕಾರವನ್ನು ಆಗ್ರಹಿಸುವ ಸಲುವಾಗಿ ಇದೇ ಸೆಪ್ಟೆಂಬರ್ 12 ರಂದು ಬೆಳಿಗ್ಗೆ 11ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ತಮಟೆ ಚಳುವಳಿ ನಡೆಸುವುದಾಗಿ ತಿಳಿಸಿದರು.
ಬಂಗಾರಪ್ಪರ ಸಮಾಧಿ ಮುಂದೆ ಪ್ರತಿಭಟನೆ
ಶಿವಮೊಗ್ಗ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಹೋಬಳಿಯ ಯಡೆಹಳ್ಳಿ ಸರ್ವೆ ನಂ. 66ರಲ್ಲಿ 34 ಕುಟುಂಬದವರಿಗೆ ತಲಾ ಎರಡು ಎಕರೆಯಂತೆ ಮಂಜೂರಾದ ಜಮೀನಿನ ಪಹಣಿಯನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಸೆಪ್ಟೆಂಬರ್ 10ರಂದು ಸೊರಬ ತಾಲ್ಲೂಕಿನ ಬಂಗಾರಪ್ಪನವರ ಸಮಾದಿ ಸ್ಥಳದ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್.ರಾಜು ತಿಳಿಸಿದ್ದಾರೆ. ಇವತ್ತು ಈ ಸಂಬಂಧ ಪ್ರತಿಭಟನೆ ನಡೆಯಲಿದೆ. ಜಮೀನಿಗೆ ಪಹಣಿ ರದ್ದು ಮಾಡಬೇಡಿ ಎಂದು ಮುಖ್ಯಮಂತ್ರಿ ಗಳಿಗೆ ಪತ್ರ ಬರೆದಿದ್ದರು. ಆದರೂ ಕೂಡ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸಚಿವರ ವಿರುದ್ದ ಕಾನೂನು ಭಂಗ ಚಳವಳಿ
ಇನ್ನೊಂದೆಡೆ ಶಿವಮೊಗ್ಗ ಮುಳುಗಡೆ ಸಂತ್ರಸ್ತರನ್ನು ಕಡೆ ಗಾಣಿಸಿ, ಸಾಗುವಳಿದಾರರಿಗೆ ಕಿರುಕುಳ ನೀಡಲು ಕಾರಣವಾಗಿರುವ ಅರಣ್ಯ ಸಚಿವ ರಾಕ್ಷಸನಾದರೆ, ಜಿಲ್ಲಾ ಉಸ್ತುವಾರಿ ಸಚಿವ ಸೊನ್ನೆಯಾಗಿದ್ದಾರೆ ಎಂದು ಮಲೆನಾಡು ರೈತರ ಹೋರಾಟ ಸಮಿತಿಯ ಸಂಚಾಲಕ ತಿ.ನಾ.ಶ್ರೀನಿವಾಸ ಆರೋಪಿಸಿದ್ದಾರೆ. ಶಿವಮೊಗ್ಗ ಪ್ರೆಸ್ ಟಸ್ಟ್ ನಲ್ಲಿ ಮಾತನಾಡಿದ ಅವರು ಬಗರ್ ಹುಕುಂದಾರರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಚಿವರ ವಿರುದ್ಧ ಕಾನೂನು ಭಂಗ ಚಳುವಳಿಯನ್ನು ಹಮ್ಮಿ ಕೊಳ್ಳಲಾಗುವುದು ಎಂದರು.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ