SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 14, 2024 shivamogga court case
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ಶಿವಮೊಗ್ಗ ಕೋರ್ಟ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ 14 ವರ್ಷ ಶಿಕ್ಷೆ ವಿಧಿಸಿದೆ.
ಶಿವಮೊಗ್ಗ ಕೋರ್ಟ್ shivamogga court case
2022ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ 31 ವರ್ಷದ ವ್ಯಕ್ತಿಯು, 32 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದ. ಈ ಸಂಬಂಧ ನೊಂದ ಮಹಿಳೆಯು ದೂರು ನೀಡಿದ್ದರು. ಇದರ ಕುರಿತಾಗಿ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. 376 ಐಪಿಸಿ ರೀತ್ಯಾ ದಾಖಲಾದ ಕೇಸ್‌ನಲ್ಲಿ ಆಗಿನ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ (charge sheet) ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಧರ್ ಹೆಚ್. ಆರ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಇದೀಗ ಪ್ರಕರಣದ ತೀರ್ಪು ಹೊರಬಿದ್ದಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ಶಿವಮೊಗ್ಗದ ನ್ಯಾಯಾಧೀಶರಾದಮೋಹನ್ ಜೆ. ಎಸ್ ರವರು ದಿನಾಂಕಃ 13-09-2024 ರಂದು ಪ್ರಕರಣದ 31 ವರ್ಷದ ಆರೋಪಿಗೆ ವ್ಯಕ್ತಿಗೆ 14 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 2,26,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದು, ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 2 ಲಕ್ಷ ರೂಗಳನ್ನು ನೊಂದ ಮಹಿಳೆಗೆ ನೀಡಲು ಆದೇಶಿಸಿರುತ್ತಾರೆ
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ