route change ಆಗಸ್ಟ್ 16 ರಂದು ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆಡಿಕೃತ್ತಿಕೆ ಹರೋಹರ ಜಾತ್ರೆ ನಡೆಯುತ್ತಿದೆ. ಆಹಿನ್ನೆಲೆ ಜಾತ್ರೆಯ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಲಿರುವುದರಿಂದ ಸಂಚಾರಕ್ಕೆ ತೊಡಕಲು ಉಂಟಾಗಲಿದ್ದು ನಗರದ ಕೆಲವೆಡೆ ವಾಹನಗಳ ಸಂಚಾರ ನಿಷೇಧ-ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ. ಈ ಸಂಚಾರ ಬದಲಾವಣೆಗಳು ಬೆಳಿಗ್ಗೆ 6:00 ರಿಂದ ರಾತ್ರಿ 10:00 ರವರೆಗೆ ಜಾರಿಯಲ್ಲಿರುತ್ತವೆ.
route change ಎಲ್ಲೆಲ್ಲಿ ಮಾರ್ಗ ಬದಲಾವಣೆ ಆಗಲಿದೆ.
ಬೆಂಗಳೂರು, ಭದ್ರಾವತಿ, ಮತ್ತು ಎನ್.ಆರ್.ಪುರದಿಂದ ಬರುವ ವಾಹನಗಳು: ಎಲ್ಲಾ ಭಾರೀ ವಾಹನಗಳು, ಬಸ್‌ಗಳು ಮತ್ತು ಕಾರುಗಳು ಎಂ.ಆರ್.ಎಸ್. ಸರ್ಕಲ್‌ನಿಂದ ಬೈಪಾಸ್ ರಸ್ತೆಯ ಮೂಲಕ ಸಂಚರಿಸಬೇಕು.
ಶಿವಮೊಗ್ಗದಿಂದ ಬೆಂಗಳೂರು, ಭದ್ರಾವತಿ, ಮತ್ತು ಚಿತ್ರದುರ್ಗಕ್ಕೆ ಹೋಗುವ ವಾಹನಗಳು: ಎಲ್ಲಾ ಭಾರೀ ವಾಹನಗಳು, ಬಸ್‌ಗಳು ಮತ್ತು ಕಾರುಗಳು ಬೈಪಾಸ್ ರಸ್ತೆ ಮತ್ತು ಎಂ.ಆರ್.ಎಸ್. ಸರ್ಕಲ್ ಮೂಲಕ ಹೋಗಬೇಕು.
ಚಿತ್ರದುರ್ಗ ಮತ್ತು ಹೊಳೆಹೊನ್ನೂರಿನಿಂದ ಬರುವ/ಹೋಗುವ ಭಾರೀ ವಾಹನಗಳು ಮತ್ತು ಬಸ್‌ಗಳು: ಈ ವಾಹನಗಳು ಭದ್ರಾವತಿ ಮಾರ್ಗವಾಗಿ, ಬೈಪಾಸ್ ರಸ್ತೆಯ ಮೂಲಕ ಶಿವಮೊಗ್ಗ ನಗರಕ್ಕೆ ಪ್ರವೇಶಿಸಬೇಕು ಮತ್ತು ಹೊರ ಹೋಗಬೇಕು.
ಚಿತ್ರದುರ್ಗ ಮತ್ತು ಹೊಳೆಹೊನ್ನೂರಿನಿಂದ ಬರುವ ಲಘು ವಾಹನಗಳು (ಕಾರುಗಳು, ದ್ವಿಚಕ್ರ ವಾಹನಗಳು): ಈ ವಾಹನಗಳು ಪಿಳ್ಳಂಗಿರಿ ಕ್ರಾಸ್ ಅಥವಾ ಹೊಳಬೆನವಳ್ಳಿ ತಾಂಡ ಕ್ರಾಸ್‌ನಿಂದ ಯಲವಟ್ಟಿ ಮಾರ್ಗವಾಗಿ, ಮಲವಗೊಪ್ಪದ ಮೂಲಕ ಬಿ.ಹೆಚ್. ರಸ್ತೆ ಸೇರಿ, ಬೈಪಾಸ್ ರಸ್ತೆಯ ಮೂಲಕ ಶಿವಮೊಗ್ಗ ನಗರಕ್ಕೆ ಹೋಗಬೇಕು.
ಶಿವಮೊಗ್ಗದಿಂದ ಹೊಳೆಹೊನ್ನೂರು ಮತ್ತು ಚಿತ್ರದುರ್ಗಕ್ಕೆ ಹೋಗುವ ಲಘು ವಾಹನಗಳು: ಈ ವಾಹನಗಳು ಬೈಪಾಸ್ ರಸ್ತೆಯ ಮೂಲಕ ಮಲವಗೊಪ್ಪದ ಯಲವಟ್ಟಿ ಕ್ರಾಸ್ ತಲುಪಿ, ಅಲ್ಲಿಂದ ಯಲವಟ್ಟಿ ಮಾರ್ಗವಾಗಿ ಪಿಳ್ಳಂಗಿರಿ ಕ್ರಾಸ್ ಮೂಲಕ ಹೊಳೆಹೊನ್ನೂರು ಮತ್ತು ಚಿತ್ರದುರ್ಗಕ್ಕೆ ಹೋಗಬೇಕು.
ಹರಿಹರ ಮತ್ತು ಹೊನ್ನಾಳಿಯಿಂದ ಬರುವ ಭಾರೀ ವಾಹನಗಳು ಮತ್ತು ಬಸ್‌ಗಳು: ಈ ವಾಹನಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆ.ಇ.ಬಿ. ಸರ್ಕಲ್, ಉಷಾ ನರ್ಸಿಂಗ್ ಹೋಂ ಸರ್ಕಲ್, ಮತ್ತು 100 ಅಡಿ ರಸ್ತೆ, ವಿನೋಬನಗರ ಮಾರ್ಗವಾಗಿ ಸಂಚರಿಸಬೇಕು.
ಹೊಳೆಹೊನ್ನೂರು ಸರ್ಕಲ್‌ನಿಂದ ಗುರುಪುರದ ಯಲವಟ್ಟಿ ಕ್ರಾಸ್‌ವರೆಗೆ ಸಾರ್ವಜನಿಕರ ವಾಹನಗಳು ಓಡಾಡದಂತೆ ಸಂಚಾರ ನಿಷೇಧ ಮಾಡಲಾಗಿದೆ.

