SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 10, 2024 | ದೇಶ ಕಂಡ ಅಪ್ರತಿಮ ಉದ್ಯಮಿ ರತನ್ ಟಾಟಾ ನಿಧನರಾಗಿದ್ದಾರೆ. ರತನ್ ನಾವಲ್ ಟಾಟಾ ಅವರಿಗೆ 86 ವರ್ಷ ವಯುಸ್ಸಾಗಿತ್ತು. ಅವರ ನಿಧನ ಬಗ್ಗೆ ಟಾಟಾ ಗ್ರೂಪ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನ ಮೊನ್ನೆಯಷ್ಟೇ ಮುಂಬೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿನ್ನೆ ರಾತ್ರಿ ಅವರು ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿಯ ಪುತ್ರನಾಗಿ 1937ರಲ್ಲಿ ಜನಿಸಿದ್ದ ರತನ್ ಟಾಟಾ ದೇಶದ ಕಂಡ ಸ್ಪೂರ್ತಿಯ ನಾಯಕರಾಗಿದ್ದವರು.
ಅವಿವಾಹಿತರಾಗಿಯೇ ಬದುಕು ಮುಗಿಸಿದ ಅವರು, ದೇಶದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಣ್ಣೀರು ಮಿಡಿದಿದ್ದಾರೆ.
SUMMARY | Ratan Tata, the country’s most iconic businessman, has passed away. He was 86 years old. The Tata Group officially shared the news of his demise on social media.
KEYWORDS | Ratan Tata passed away, Tata Group , social media.