Rapid Response Heroes 112 /ಅಸ್ವಸ್ಥ ಮಹಿಳೆಗೆ ನೆರವು /ಬಸ್​,ಟ್ರಕ್ ಅಪಘಾತ/ ಸಂಶಯ ದೂರ ಮಾಡಿದ ಪೊಲೀಸ್

ajjimane ganesh

Rapid Response Heroes 112  ತೀರ್ಥಹಳ್ಳಿ: ಬಸ್ ನಿಲ್ದಾಣದಲ್ಲಿ ಅಸ್ವಸ್ಥ ಮಹಿಳೆಗೆ 112ರಿಂದ ನೆರವು

Malenadu Today

ತೀರ್ಥಹಳ್ಳಿ, ಜುಲೈ 9, 2025: ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಅಸ್ವಸ್ಥರಾಗಿ ಮಲಗಿದ್ದ ಮಹಿಳೆಯೊಬ್ಬರಿಗೆ 112 ಸಹಾಯವಾಣಿ ಮೂಲಕ ತಕ್ಷಣವೇ ನೆರವು ಒದಗಿಸಲಾಗಿದೆ. ದೂರುದಾರರ ಕರೆಯ ಮೇರೆಗೆ ಸ್ಥಳಕ್ಕೆ ಧಾವಿಸಿದ ERV (ಎಮರ್ಜೆನ್ಸಿ ರೆಸ್ಪಾನ್ಸ್ ವೆಹಿಕಲ್) ಸಿಬ್ಬಂದಿ, 108 ಆಂಬುಲೆನ್ಸ್‌ಗೆ ಕರೆ ಮಾಡಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಕುಟುಂಬದವರಿಗೂ ವಿಷಯ ತಿಳಿಸಿ, ಅವರ ಆರೋಗ್ಯಕ್ಕೆ ಬೇಕಾದ ಅನುಕೂಲ ಮಾಡಿಕೊಡುವ ವ್ಯವಸ್ಥೆ ಮಾಡಿದ್ದಾರೆ. 

- Advertisement -

Malenadu Today

Rapid Response Heroes 112  ತುಂಗಾನಗರ: ಅನಾಥಾಶ್ರಮದ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿ ವಿಚಾರಣೆ

ತುಂಗಾನಗರ, ಜುಲೈ 9, 2025: ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅನಾಥಾಶ್ರಮದ ಹೆಸರಿನಲ್ಲಿ ಅನುಮಾನಾಸ್ಪದವಾಗಿ ಹಣ ಸಂಗ್ರಹಿಸುತ್ತಿದ್ದ ಬಗ್ಗೆ 112 ಸಹಾಯವಾಣಿಗೆ ದೂರು ಬಂದಿತ್ತು. ದೂರು ಸ್ವೀಕರಿಸಿದ ERV ಸಿಬ್ಬಂದಿ ಸ್ಥಳಕ್ಕೆ ತಲುಪಿ ಆ ವ್ಯಕ್ತಿಯನ್ನು ವಿಚಾರಿಸಿದ್ದಾರೆ. ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ನಂತರ ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ. ಸ್ಥಳೀಯರು ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರ ಮೊರೆಹೋಗಿದ್ದು ಗಮನಾರ್ಹವಾಗಿತ್ತು.

Malenadu Today

Rapid Response Heroes 112  ಆನಂದಪುರ: ಬಸ್-ಕ್ಯಾಂಟರ್ ಅಪಘಾತ, ತಕ್ಷಣ ರಸ್ತೆ ತೆರವು

ಆನಂದಪುರ, ಜುಲೈ 10, 2025: ಆನಂದಪುರ ಠಾಣಾ ವ್ಯಾಪ್ತಿಯಲ್ಲಿ ಬಸ್ ಮತ್ತು ಕ್ಯಾಂಟರ್ ನಡುವೆ ಅಪಾಘಾತ ಸಂಭವಿಸುತ್ತು. ಇನ್ನೂ ಅಪಘಾತದ ಬಗ್ಗೆ 112 ಸಹಾಯವಾಣಿಗೆ ಕರೆ ಬಂದ ತಕ್ಷಣ ERV ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿ, ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Rapid Response Heroes 112
Rapid Response Heroes 112

 

112 ERV Responds to Distress, Suspicious Activity & Road Accidents

Learn about recent 112 ERV responses in Shivamogga district: aiding an unwell woman in Thirthahalli, investigating a suspicious fundraiser in Tunganagar, and managing a bus-canter accident in Anandapura, ensuring public safety and smooth operations.

112 helpline, ERV response, emergency services, Thirthahalli, Tunganagar, Anandapura, Shivamogga district, unwell person, suspicious activity, fundraising, road accident, Karnataka Police, public safety, emergency medical services, traffic management , #KarnatakaPolice #112Helpline #EmergencyResponse #PublicSafety #Shivamogga #Thirthahalli #Tunganagar #Anandapura #RoadSafety #CommunitySafety ,112 ಸಹಾಯವಾಣಿ, ಇಆರ್‌ವಿ ಪ್ರತಿಕ್ರಿಯೆ, ತುರ್ತು ಸೇವೆಗಳು, ತೀರ್ಥಹಳ್ಳಿ, ತುಂಗಾನಗರ, ಆನಂದಪುರ, ಶಿವಮೊಗ್ಗ ಜಿಲ್ಲೆ, ಅಸ್ವಸ್ಥ ಮಹಿಳೆ, ಅನುಮಾನಾಸ್ಪದ ಚಟುವಟಿಕೆ, ನಿಧಿ ಸಂಗ್ರಹ, ರಸ್ತೆ ಅಪಘಾತ, ಕರ್ನಾಟಕ ಪೊಲೀಸ್, ಸಾರ್ವಜನಿಕ ಸುರಕ್ಷತೆ, ತುರ್ತು ವೈದ್ಯಕೀಯ ಸೇವೆ, ಸಂಚಾರ ನಿರ್ವಹಣೆ, #KarnatakaPolice #112Helpline #EmergencyResponse #PublicSafety #Shivamogga #Thirthahalli #Tunganagar #Anandapura #RoadSafety #CommunitySafety

112 ERV: Karnatakas Rapid Response Heroes Tackle Emergencies Across Shivamogga,  

Share This Article
Leave a Comment

Leave a Reply

Your email address will not be published. Required fields are marked *