ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025: ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ಸಂಬಂಧಿಕರು ಅಥವಾ ವಾರಸುದಾರರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಪ್ರಕಟಣೆ ನೀಡಿದ್ದು, ಸುಳಿವು ನೀಡುವಂತೆ ಸಾರ್ವಜನಿಕರ ಸಹಕಾರ ಕೋರಿದೆ.
ಶಿವಮೊಗ್ಗ ಪೊಲೀಸ್ ಇಲಾಖೆಯ ಚೀತಾ ಬಗ್ಗೆ ಇರಲಿ ಎಚ್ಚರಿಕೆ!? ಏನಿದು ಗೊತ್ತಾ ?
ನಡೆದಿದ್ದೇನು?Police appeal
ಶಿವಮೊಗ್ಗ ನಗರದ ವೀರಭದ್ರ ಟಾಕೀಸ್ ಎದುರಿನ ಫುಟ್‌ಪಾತ್ ಮೇಲೆ ಸುಮಾರು 45 ರಿಂದ 50 ವರ್ಷ ವಯಸ್ಸಿನ ಪುರುಷರೊಬ್ಬರು ಕುಸಿದು ಬಿದ್ದಿದ್ದರು. ಅವರನ್ನು ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಗೆ ಸ್ಪಂದಿಸದೆ, ಅಕ್ಟೋಬರ್ 9 ರಂದು ಅವರು ಮೃತಪಟ್ಟಿದ್ದಾರೆ. ಮೃತರ ಹೆಸರು, ವಿಳಾಸ ಅಥವಾ ವಾರಸುದಾರರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ಪೊಲೀಸ್ ಇಲಾಖೆ ಗುರುತು ಪತ್ತೆಗೆ ಪ್ರಕಟಣೆಯನ್ನ ನೀಡಿದೆ.

ತುಂಗಾ ಡ್ಯಾಮ್ ನೋಡಲು ಬಂದವರಿಂದ ಹಲ್ಲೆ! ಬಂದವರ ಮೇಲೆಯು ಹಲ್ಲೆ! 2FIR ! ನಡೆದಿದ್ದೇನು?
ಮೃತ ವ್ಯಕ್ತಿಯ ವಿವರ/Police appeal
ಮೃತರ ಎತ್ತರ ಸುಮಾರು 5.10 ಅಡಿಗಳಷ್ಟಿದ್ದು, ತೆಳ್ಳನೆಯ ದೇಹ, ಕೋಲು ಮುಖ ಮತ್ತು ಎಣ್ಣೆಗೆಂಪಿನ ಮೈಬಣ್ಣವನ್ನು ಹೊಂದಿದ್ದಾರೆ. ಬಲಗೈ ತೋಳಿನ ಮೇಲೆ ಇಂದ್ರ ಎಂಬ ಕನ್ನಡ ಅಕ್ಷರ ಮತ್ತು ಸೂರ್ಯನ ಚಿತ್ರದ ಟ್ಯಾಟೂ ಇದೆ. ದೇಹದ ಮೇಲೆ, ನಿರ್ದಿಷ್ಟವಾಗಿ ಹೊಟ್ಟೆಯ ಭಾಗದಲ್ಲಿ ಸುಮಾರು 8 ಇಂಚು ಉದ್ದದ ಹಳೆಯ ಅಪರೇಷನ್ ಗಾಯದ ಗುರುತು ಸಹ ಇದೆ.
ಈ ಅನಾಮಧೇಯ ಮೃತ ವ್ಯಕ್ತಿಯ ಬಗ್ಗೆ ಅಥವಾ ಅವರ ವಾರಸುದಾರರ ಬಗ್ಗೆ ನಿಮಗೆ ಯಾವುದೇ ಮಾಹಿತಿ ತಿಳಿದುಬಂದಲ್ಲಿ, ದಯವಿಟ್ಟು ಕೂಡಲೇ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಸಂಪರ್ಕ ಸಂಖ್ಯೆ: 08182-261415.
Shivamogga Police appeal for information to identify the next of kin of a man (45-50 yrs)
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
