SHIVAMOGGA | MALENADUTODAY NEWS | Aug 20, 2024 ಮಲೆನಾಡು ಟುಡೆ
ಸಿಎಂ ಸಿದ್ದರಾಮಯ್ಯರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಎಂಎಲ್‌ಸಿ ಐವಾನ್ ಡಿಸೋಜಾರವರು ನೀಡಿರುವ ಹೇಳಿಕೆಯೊಂದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜಭವನ
ರಾಜಭವನದ ಮೇಲೆ ದಾಳಿ ಮಾಡುವ ರೀತಿಯಲ್ಲಿ ಹೇಳಿಕೆಯನ್ನು ನೀಡಿರುವುದು ಸರಿಯಲ್ಲ ಎಂದು ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ ( Shivamogga City MLA S N Channabasappa )ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಸಿದ್ದರಾಮಯ್ಯರವರದ್ದು ತಪ್ಪಿಲ್ಲವಾದರೇ ತನಿಖೆ ಎದುರಿಸಿ ಬರಲಿ ನಾವೇ ಅವರ ಪಾದವನ್ನು ತೊಳೆಯುತ್ತೇವೆ ಎಂದು ಸವಾಲ್ ಹಾಕಿದ್ದಾರೆ.
ಕಾನೂನು ಕ್ರಮಕ್ಕೆ ಆಗ್ರಹ
ಈ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಂ.ಎಲ್.ಸಿ. ಐವಾನ್ ಡಿಸೋಜಾ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಹೇಳಿದ್ದೆ ಸಂವಿಧಾನ ಎಂದು ಅದರ ಕಾರ್ಯಕರ್ತರು ಅಂದುಕೊಂಡಿದ್ದಾರೆ. ಇಡೀ ದೇಶಕ್ಕೆ ರಾಜ್ಯಕ್ಕೆ ಅಪಮಾನ ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಇದೆ ಎಂದು ಟೀಕಿಸಿದ್ದಾರೆ.
ರಾಜ್ಯದ ಜನರಿಗೆ ಅವಮಾನ
ನೈತಿಕತೆ ನೆಲೆಗಟ್ಟು ಇಟ್ಟು ಕೊಂಡು ಪ್ರಶ್ನೆ ಮಾಡಬೇಕು ಎಂದು ಚನ್ನಬಸಪ್ಪ, ರಾಜ್ಯಪಾಲರನ್ನ ಗುರಿಯಾಗಿಟ್ಟುಕೊಂಡು ವಿರೋಧ ಮಾಡುತ್ತಿದ್ದಾರೆ. ರಾಜ್ಯಪಾಲರ ನಿರ್ಣಯವನ್ನು ಕಾಂಗ್ರೆಸ್ ಅವಮಾನಿಸುತ್ತಿದೆ. ಇದು ರಾಜ್ಯದ ಜನರಿಗೆ ಮಾಡಿದ ಅವಮಾನವಾಗಿದೆ.
ಕೃಷ್ಣ ಬೈರೇಗೌಡವರ ಮೇಲಿನ ಗೌರವ ಕಡಿಮೆಯಾಗಿದೆ
ಸಚಿವ ಕೃಷ್ಣ ಬೈರೇಗೌಡ ಮಾತಾನಾಡಿದ ಹೇಳಿಕೆ ನಿಜಕ್ಕೂ ಬೇಸರ ತರಿಸಿದೆ ಎಂದು ಶಿವಮೊಗ್ಗ ನಗರ ಶಾಸಕರು ಅವರ ಮೇಲೆ ಇದ್ದ ಗೌರವ ಕಡಿಮೆ ಆಗಿದೆ ಎಂದರು. ಅಲ್ಲದೆ ಐವಾನ್ ಡಿಸೋಜಾರವರು ಕೂಡ ಏನೇನೋ ಬಾಯಿಗೆ ಬಂದಂತೆ ಮಾತನಾಡಿದ್ದಾರೆ , ಅವರು ಐವಾನ್ ಡಿಸೋಜಾ ಅಲ್ಲಾ ಹೈವಾನ್ ಡಿಸೋಜಾ, ಅವರು ಹೆಸರಿಗೆ ತಕ್ಕ ಹಾಗೇ ಇದೆ ಇದ್ದಾರೆ
ಎಂದು ವ್ಯಂಗ್ಯವಾಡಿದ್ದಾರೆ.,
ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬದುಕಿದ್ದೀಯಾ ಅನ್ನೋದು ಪ್ರಶ್ನೆಯಾಗಿದೆ ಎಂದು ಶಾಸಕರು ಕಾಂಗ್ರೆಸ್‌ನವರು ಇಡೀ ವ್ಯವಸ್ಥೆಯನ್ನೆ ಬುಡಮೇಲು ಮಾಡೋಕೆ ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು, ನಿಮ್ಮ ಹಿರಿತನಕ್ಕೆ ತಕ್ಕುದಾದ ನಡವಳಿಕೆ ಇದಲ್ಲ ಎಂದು ಟೀಕಿಸಿದ ಶಿವಮೊಗ್ಗ ನಗರ ಶಾಸಕ ನೀವು ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ ಸಿದ್ದರಾಮಯ್ಯ ಅವರೇ ತನಿಖೆ ಎದುರಿಸಲು ತಾಕತ್ತು ಇಲ್ವ ಎಂದು ಪ್ರಶ್ನಿಸಿದ್ರು.
ಉತ್ತರ ಕೊಡದೇ ಪಲಾಯನ
ಅಲ್ಲದೆ ಸಿದ್ದರಾಮಯ್ಯರವರು ವಿಧಾನಸೌಧದಲ್ಲೇ ಉತ್ತರ ಕೊಡದೆ ಪಲಾಯನ ಮಾಡಿದ್ದರು. ಅವರು ಕಳಂಕಿತ ಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವಾಗ ರಾಜ್ಯಪಾಲರು ಒಳ್ಳೇಯವರಾಗಿದ್ದರು, ಈಗ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ ಕಾಂಗ್ರೆಸಿಗರಿಗೆ ಕೆಟ್ಟವರಾಗಿ ಕಾಣುತ್ತಿದ್ದಾರೆ ಎಂದರು.
ಕಾಲು ತೊಳೆದು ನೀರು ಕುಡಿಯುತ್ತೇವೆ
ತಪ್ಪಿಲ್ಲ, ತಪ್ಪು ಆಗಿಲ್ಲ ಅಂತಾದರೆ ಸಿಎಂ ಸಿದ್ದರಾಮಯ್ಯರವರೇ ತನಿಖೆ ಎದುರಿಸಿ ಎಂದು ಸವಾಲ್ ಹಾಕಿದ ಚನ್ನಬಸಪ್ಪರವರು ತಪ್ಪಿತಸ್ತರಲ್ಲ ಎಂದು ತನಿಖೆಯಿಂದ ಮುಕ್ತರಾಗಿ ಹೊರಕ್ಕೆ ಬಂದರೆ, ನಿಮ್ಮ ಪಾದ ಬೇಕಾದ್ರೆ ತೊಳೆದು ಆ ನೀರು ನಾವು ಕುಡಿಯುತ್ತೇವೆ ಎಂದು ಏರಿದ ಧ್ವನಿಯಲ್ಲಿ ಶಾಸಕರು ಚಾಲೆಂಜ್ ಮಾಡಿದರು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಇನ್ನಷ್ಟು ಸುದ್ದಿಗಳು
-
ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ
-
ಜೋಗ್‌ಪಾಲ್ಸ್ ಗೆ ಹೋಗುವಾಗ ಇರಲಿ ಎಚ್ಚರ | ಪ್ರಯಾಣಿಕನ ಮೇಲೆಯೇ ಹರಿಯಿತು ಬಸ್ | ನಡೆದಿದ್ದೇನು?
-
Shikaripura | ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನ |
-
ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ | ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಏಳು ಪ್ರಮುಖ ಸೂಚನೆ
-
ಭದ್ರಾ ಭರ್ತಿ : ರೈತರ ಮೊಗದಲ್ಲಿ ಮಂದಹಾಸ | ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇನು?
-
ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ