missing case ಶಿವಮೊಗ್ಗ, ರಿಪ್ಪನ್ಪೇಟೆ ವರದಿ, malenadutoday news : dharmasthala case ನಲ್ಲಿ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯಲ್ಲೊಂದು ಟ್ವಿಸ್ಟ್ ಸಿಕ್ಕಿದೆ. 2003 ರಲ್ಲಿ ಕೊಲ್ಗೊತ್ತಾದಲ್ಲಿ ಸ್ಟೇನೋ ಆಗಿದ್ದೆ ಎಂದಿದ್ದ, ಅನನ್ಯಾ ಭಟ್ ಪ್ರಕರಣದಲ್ಲಿ ದೂರು ನೀಡಿರುವ ಸುಜಾತಾ ಭಟ್ರವರು 2003 ರಲ್ಲಿ ರಿಪ್ಪನ್ ಪೇಟೆಯಲ್ಲಿದ್ದರು ಎಂಬುದನ್ನ ಅವರ ಭಾವ, ರಿಪ್ಪನ್ ಪೇಟೆಯ ಸ್ಥಳೀಯರು ಮತ್ತು ಅದೇ ಸಂದರ್ಭದಲ್ಲಿ ವರದಿಯಾಗಿದ್ದ ವಾರಪತ್ರಿಕೆಯ ಫೋಟೋಗಳು ಹೇಳುತ್ತಿವೆ. ಸದ್ಯ ಅಂದು ಸುಜಾತಾ ಭಟ್ರವರ ಬಗ್ಗೆ ರಿಪ್ಪನ್ ಪೇಟೆಯ ಕಮಲವಾಣಿ ಎಂಬ ವಾರಪತ್ರಿಕೆಯಲ್ಲಿ ಬಂದಿದ್ದ ಆರ್ಟಿಕಲ್ನ ಪ್ರತಿಯು ಮಲೆನಾಡುಟುಡೆಗೆ ಲಭ್ಯವಾಗಿದೆ.
missing case ಇನ್ನೂ ಕಮಲವಾಣಿಯಲ್ಲಿ ಬಂದಿರುವ ವರದಿ ಪ್ರಕಾರ, ಸುಜಾತಾ ಭಟ್ ಪ್ರಭಾಕರ್ ಎಂಬವರ ಜೊತೆಗೆ ಬೀದಿ ನಾಯಿಗಳನ್ನು ಸಾಕಿಕೊಂಡು ರಿಪ್ಪನ್ಪೇಟೆಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಇವರಿಬ್ಬರು ಬೀದಿ ನಾಯಿಗಳಿಗೆ ಆಶ್ರಯ ನೀಡುತ್ತಿರುವುದನ್ನು ಗಮನಿಸಿದ ಪತ್ರಿಕೆ ಈ ಬಗ್ಗೆ ವಿಶೇಷ ಆರ್ಟಿಕಲ್ ಫೋಟೋ ಸಮೇತ ಮಾಡಿತ್ತು. ಆ ವರದಿಯನ್ನು ಉಮೇಶ್ ವಾರಂಬಳ್ಳಿ ಎಂಬವರು ಮಾಡಿದ್ದರು. ಅವರ ವರದಿಯಲ್ಲಿ ರಿಪ್ಪನ್ ಪೇಟೆಯ ಜಿ. ಪ್ರಭಾಕರ ಸುಜಾತ ದಂಪತಿಗಳು ನಿಸ್ವಾರ್ಥದಿಂದ ಅನಾಥ ಶ್ವಾನಗಳನ್ನು ಸಾಕಿ ಸಲಹುತ್ತಿರುವುದು ಆದರ್ಶಯುತವಾಗಿದೆ ಎಂದು ಬರೆದಿದ್ದರು.
ಇದನ್ನು ಸಹ ಓದಿ : ಧರ್ಮಸ್ಥಳ ಅನನ್ಯಾ ಭಟ್ ಕೇಸ್, ರಿಪ್ಪನ್ಪೇಟೆಯಲ್ಲಿದ್ರಾ ಸುಜಾತಾ ಭಟ್! ನಿಜವೇನು? https://malenadutoday.com/dharmasthala-ananya-bhat-case-link-to-shivamogga/
ಕಳೆದ ಹತ್ತು ವರ್ಷಗಳಿಂದ 15-20 ನಾಯಿಗಳನ್ನು ಇವರು ಸಾಕಿಕೊಂಡು ಬಂದಿದ್ದಾರೆ. ಇವೆಲ್ಲ ಬೀದಿಯಲ್ಲಿ ಅನಾಥವಾಗಿ ಅನ್ನ ನೀರಿಲ್ಲದೆ ಸಾವು ಬದುಕಿನೊಂದಿಗೆ ನಿಸ್ಸಹಾಯಕವಾಗಿ ಸೆಣಸುತ್ತಿದ್ದಂತಹವು, ಕೆಲವಂತೂ ವಾಹನಗಳಿಗೆ ಸಿಕ್ಕು ಅಂಗವಿಕಲವಾದಂತಹವು. ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದವನ್ನೂ ತಂದು ಆರೋಗ್ಯವಂತವಾಗಿಸಿದ್ದಾರೆ.ಇವರು ನಾಯಿಗಳ ಆರೋಗ್ಯ ರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವುದು ಪ್ರಶಂಸನೀಯ ಎಂದು ನಮೂದಿಸಿದ್ದಾರೆ. ಅಲ್ಲದೆ ಮಕ್ಕಳಿಲ್ಲದ ಈ ದಂಪತಿಗಳು ನಾಯಿಗಳನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಬರೆಯಲಾಗಿದೆ.
ಈ ಆರ್ಟಿಕಲ್ನಲ್ಲಿ ಸುಜಾತಾ ದಂಪತಿಗೆ ಮಕ್ಕಳಿಲ್ಲ ಎಂದು ಹೇಳಲಾಗಿದೆ, ಆದರೆ ಸುಜಾತಾ ಭಟ್ ತಮ್ಮ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾರೆ ಎನ್ನುತ್ತಿದ್ದಾರೆ. ಅಲ್ಲದೆ 2003 ರಲ್ಲಿ ಆಕೆ ಎಂಬಿಬಿಎಸ್ ಓದುತ್ತಿದ್ದರು ಎನ್ನುವ ಸುಜಾತಾ ಭಟ್ ರವರ ಬಗ್ಗೆ ಕಮಲವಾಣಿಯಲ್ಲಿ 2003 ರಲ್ಲಿಯೇ ಆರ್ಟಿಕಲ್ ಬಂದಿದೆ. ಮೇಲಾಗಿ ವರದಿಯಲ್ಲಿ ಹಲವು ವರ್ಷಗಳಿಂದ ಸುಜಾತಾ ರಿಪ್ಪನ್ ಪೇಟೆಯಲ್ಲಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಸುಜಾತಾ ಭಟ್ರವರ ಭಾವ ಕೂಡ ಸಂದರ್ಶನದಲ್ಲಿ ಸುಜಾತಾ ಭಟ್ರವರು ರಿಪ್ಪನ್ ಪೇಟೆಯಲ್ಲಿದ್ದರು ಎಂದು ಹೇಳಿದ್ದಾರೆ.
ಸುಜಾತಾ ಭಟ್ರವ ಭಾವನ ಹೇಳಿಕೆ, ರಿಪ್ಪನ್ಪೇಟೆಯಲ್ಲಿಯ ವಾರ ಪತ್ರಿಕೆಯಲ್ಲಿ ಆ ಸಂದರ್ಭದಲ್ಲಿ ಬಂದಿದ್ದ ವರದಿ ಇದೀಗ ಇಡೀ ಪ್ರಕರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತಿದೆ. ಮೇಲಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗುವಂತೆ ಮಾಡಿವೆ.
missing case



