kantara big news / ಕಾಂತಾರ ಸೆಟ್​ನಲ್ಲಿ ನಿಜಕ್ಕೂ ಆಗಿದ್ದೇನು? ಚಿತ್ರತಂಡ ಹೇಳಿದ್ದೇನು?

Malenadu Today

kantara big news ಶಿವಮೊಗ್ಗ: ‘ಕಾಂತಾರ ಅಧ್ಯಾಯ-1’ ಸಿನಿಮಾ ಚಿತ್ರೀಕರಣದ ವೇಳೆ ಮಾಣಿ ಹಿನ್ನೀರಿನಲ್ಲಿ ಸಂಭವಿಸಿದ ಅವಘಡದ ಕುರಿತು ಕೊನೆಗೂ ಚಿತ್ರತಂಡದಿಂದ ಸ್ಪಷ್ಟನೆ ದೊರೆತಿದೆ. ಹೊಂಬಾಳೆ ಫಿಲ್ಮ್ಸ್‌ನ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆದರ್ಶ್ ಅವರು ಈ ಘಟನೆ ಕುರಿತು ಮಾಹಿತಿ ನೀಡಿದ್ದು, ಯಾರೊಬ್ಬರಿಗೂ ಯಾವುದೇ ಹಾನಿಯಾಗಿಲ್ಲ ಎಂದು ಖಚಿತಪಡಿಸಿದ್ದಾರೆ.

kantara big news ಘಟನೆ ಬಗ್ಗೆ ಆದರ್ಶ್ ಅವರ ಸ್ಪಷ್ಟನೆ ಹೀಗಿದೆ:

“ಮಾಣಿ ಹಿನ್ನೀರಿನಲ್ಲಿ ‘ಕಾಂತಾರ ಅಧ್ಯಾಯ-1′ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ನಮ್ಮ ಸೆಟ್‌ನಲ್ಲಿ ಬ್ಯಾಕ್‌ಡ್ರಾಪ್‌ಗಾಗಿ ಶಿಪ್ ಸೆಟ್ ಅನ್ನು ಹಾಕಲಾಗಿತ್ತು. ನಿನ್ನೆ (ಜೂನ್ 14, 2025) ಚಿತ್ರೀಕರಣ ನಡೆಯುವ ವೇಳೆ, ಜೋರಾದ ಗಾಳಿ ಮತ್ತು ಮಳೆಯಿಂದಾಗಿ ಆ ಶಿಪ್ ಸೆಟ್ ಪಲ್ಟಿಯಾಗಿದೆ. ಈ ಘಟನೆ ಸಂಭವಿಸಿದಾಗ ನಮ್ಮ ಚಿತ್ರತಂಡದ ಯಾರೊಬ್ಬರೂ ಆ ಸ್ಥಳದಲ್ಲಿ ಇರಲಿಲ್ಲ. ಚಿತ್ರೀಕರಣ ನಡೆಯುತ್ತಿದ್ದ ಜಾಗ ಸೆಟ್‌ನಿಂದ ಸ್ವಲ್ಪ ದೂರದಲ್ಲಿತ್ತು. ಹಾಗಾಗಿ, ನಿನ್ನೆ ನಡೆದ ಈ ಅವಘಡದಲ್ಲಿ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.”

kantara big news
kantara big news

ಚಿತ್ರೀಕರಣಕ್ಕೆ ಅಗತ್ಯ ಅನುಮತಿಗಳ ಕುರಿತು:

ಜಿಲ್ಲಾಧಿಕಾರಿಗಳು ಅನುಮತಿಯ ಬಗ್ಗೆ ನೋಟಿಸ್ ನೀಡುವ ವಿಚಾರದ ಕುರಿತು ಕೇಳಿದಾಗ, ಆದರ್ಶ್ ಅವರು, “ನಮ್ಮ ಚಿತ್ರೀಕರಣಕ್ಕೆ ಅಗತ್ಯವಾದ ಎಲ್ಲಾ ಅನುಮತಿಗಳನ್ನು ನಾವು ಪಡೆದುಕೊಂಡಿದ್ದೇವೆ. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಕೆಪಿಸಿ (ಕರ್ನಾಟಕ ಪವರ್ ಕಾರ್ಪೊರೇಷನ್) ನಿಂದಲೂ ನಾವು ಅನುಮತಿಗಳನ್ನು ಪಡೆದಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

ಮುಂಜಾಗ್ರತಾ ಕ್ರಮದ ಬಗ್ಗೆ 

ನಾವು ನೀರಿನ ಭಾಗದಲ್ಲಿ ಯಾವುದೇ ರೀತಿಯಲ್ಲಿ ಚಿತ್ರೀಕರಣವನ್ನು ನಡೆಸುತ್ತಿಲ್ಲ. ಆದಾಗ್ಯೂ, ಸಂಪೂರ್ಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಚಿತ್ರೀಕರಣ ಸ್ಥಳದಲ್ಲಿ ಸ್ಪೀಡ್ ಬೋಟ್‌ಗಳು, ತರಬೇತಿ ಪಡೆದ ಈಜುಗಾರರು, ಸ್ಥಳೀಯ ಮೀನುಗಾರರು ಮತ್ತು ಸ್ಕೂಬಾ ಡೈವರ್‌ಗಳು ಕೂಡ ಸನ್ನದ್ಧರಾಗಿದ್ದಾರೆ. ಜೊತೆಗೆ, ಸಾಕಷ್ಟು ಸಂಖ್ಯೆಯ ಲೈಫ್ ಜಾಕೆಟ್‌ಗಳನ್ನು ಇಟ್ಟುಕೊಂಡು ಚಿತ್ರೀಕರಣ ಮುಂದುವರಿಸಿದ್ದೇವೆ. ಶಿಪ್ ಸೆಟ್ ಹಾಕಿರೋದು ಕೇವಲ ಬ್ಯಾಕ್‌ಡ್ರಾಪ್‌ಗಷ್ಟೇ ಆಗಿದ್ದು, ಅದು ಪಲ್ಟಿಯಾದಾಗ ಯಾವುದೇ ರೀತಿಯ ದೊಡ್ಡ ಸಮಸ್ಯೆ  ಆಗಿಲ್ಲ ಎಂದರು 

ಇಂದು ಕೂಡ ಚಿತ್ರೀಕರಣವನ್ನು ಎಂದಿನಂತೆ ಮುಂದುವರಿಸಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಸ್ಪಷ್ಟನೆಯು ‘ಕಾಂತಾರ’ ತಂಡದ ಸುತ್ತ ಇತ್ತೀಚೆಗೆ ಹರಿದಾಡುತ್ತಿದ್ದ ಆತಂಕ ಮತ್ತು ವದಂತಿಗಳಿಗೆ ತೆರೆ ಎಳೆದಿದೆ.

ಹೆಚ್ಚಿನ ಮಾಹಿತಿ ಹಾಗೂ ಅಪ್ಡೇಟ್‌ಗಳಿಗಾಗಿ:

Share This Article