Malenadu monsoon forecast 21 ಶಿವಮೊಗ್ಗ, malenadu today news : August 21 2025 ಶಿವಮೊಗ್ಗವೂ ಸೇರಿದಂತೆ, ರಾಜ್ಯದೆಲ್ಲೆಡೆ ಇವತ್ತು ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ವರದಿ ಮಾಡಿದೆ. ಇಲಾಖೆಗಳ ಈ ಮಾಹಿತಿ ಪ್ರಕಾರ, ಇನ್ನಷ್ಟು ವಿವರಗಳನ್ನು ಗಮನಿಸುವುದಾದರೆ, ಉಡುಪಿ (Udupi) ಮತ್ತು ಉತ್ತರ ಕನ್ನಡದಲ್ಲಿ (Uttara Kannada) ಇಂದು ಭಾರಿ ಮಳೆ (heavy rain)ಯಾಗಲಿದೆ ಎನ್ನಲಾಗಿದೆ. ಆಯ್ದ ಸ್ಥಳಗಳಲ್ಲಿ ಮಳೆಯಾಗಲಿದೆ ಎಂದು ಪ್ರಕಟಣೆ ನೀಡಲಾಗಿದೆ.

ನಿಮಗಿದು ಗೊತ್ತಾ! ಹೀಗೂ ಬಾಡಿ ಬಿಲ್ಡ್ ಮಾಡಬಹುದು! ಮೈಂಡ್ ಫ್ರೆಶ್ ಮಾಡ್ಕೋಬಹುದು! https://malenadutoday.com/health-tips-by-malenadu-today
ಇನ್ನೂ ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಸಾಧಾರಣ ಹಾಗೂ ಬೆಳಗಾವಿ (Belagavi) ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ದಕ್ಷಿಣ ಒಳನಾಡು ಮತ್ತು ಮಲೆನಾಡು / Malenadu monsoon forecast 21
ದಕ್ಷಿಣ ಒಳನಾಡು ಮತ್ತು ಮಲೆನಾಡಿನಾದ್ಯಂತ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬಳ್ಳಾರಿ, ಬೆಂಗಳೂರು (ಗ್ರಾಮೀಣ ಮತ್ತು ನಗರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಲಿದೆ.

ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
Malenadu monsoon forecast 21