Lokayukta case k s Eshwarappa family / ಈಶ್ವರಪ್ಪರ ಕುಟುಂಬದ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಕೇಸ್! ಏನಿದು?

ajjimane ganesh

Lokayukta case k s Eshwarappa family  : ಕೆ.ಎಸ್. ಈಶ್ವರಪ್ಪ, ಪುತ್ರ ಕಾಂತೇಶ್​ ಹಾಗೂ ಸೊಸೆ ವಿರುದ್ಧ ಲೋಕಾಯುಕ್ತ ಪ್ರಕರಣ: 

Shivamogga news / ಶಿವಮೊಗ್ಗ/  ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಅವರ ಪುತ್ರ ಕೆ.ಇ. ಕಾಂತೇಶ್ ಮತ್ತು ಸೊಸೆ ಆರ್. ಶಾಲಿನಿ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟ್​ನ ಪಿಸಿಆರ್ ಸಂಬಂಧ ಈ ಕೇಸ್ ದಾಖಲಾಗಿ ಪ್ರಕರಣದ ತನಿಖೆಯು ಸಹ ಆರಂಭವಾಗಿದೆ. ಪೂರಕವಾಗಿ ಈ ಪ್ರಕರಣದ ಕುರಿತು ಸಂಬಂಧ ಪಟ್ಟ ದಾಖಲಾತಿಗಳನ್ನು ಒದಗಿಸುವಂತೆ ಹಾಗೂ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಖಾಸಗಿ ದೂರಿಗೆ ಸಂಬಂಧಿಸಿದ ವಕೀಲರಿಗೆ ನೋಟಿಸ್ ಮಾಡಿದೆ. ಸಿಎಆರ್​ಪಿಸಿ ಕಲಂ 91 ಅಡಿಯಲ್ಲಿ ಈ ಕುರಿತು ನೋಟಿಸ್ ಜಾರಿ ಮಾಡಲಾಗಿದೆ. 

ಪ್ರಕರಣದ ವಿವರ 

ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ ಬೆಂಗಳೂರು (ಕರ್ನಾಟಕ ರಾಜ್ಯದ ಚುನಾಯಿತ, ಮಾಜಿ ಮತ್ತು ಹಾಲಿ ಸಂಸದರು/ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸುವ ವಿಶೇಷ ನ್ಯಾಯಾಲಯ – CCH-91) ದ ಪಿಸಿಆರ್ ನಂ:38/2021 ರಲ್ಲಿ ಸಲ್ಲಿಕೆಯಾಗಿರುವ ಖಾಸಗಿ ದೂರಿನ ಮೇರೆಗೆ, ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ದಿನಾಂಕ 02-07-2025 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

- Advertisement -
Lokayukta case k s Eshwarappa family
k s eshwarappa ಕಾಂಗ್ರೆಸ್​ ವಿರುದ್ದ ಕೆ ಎಸ್​ ಈಶ್ವರಪ್ಪ ಆಕ್ರೋಶ

ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 ರ ಕಲಂ 13(1)(d) ಮತ್ತು 13(1)(e) ಹಾಗೂ ಕಲಂ 120(B) ಮತ್ತು 420 ರ ಅಡಿಯಲ್ಲಿ ದಾಖಲಾಗಿದೆ. ಹೀಗಾಗಿ ಈ ಸಂಬಂಧ  ದಿನಾಂಕ 04-07-2025 ರಂದು ಬೆಳಿಗ್ಗೆ 11:00 ಗಂಟೆಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ದಾಖಲಾತಿಗಳು ಮತ್ತು ಸಾಕ್ಷಾಧಾರಗಳೊಂದಿಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ವಕೀಲಾರದ ವಿನೋದ್​ಗೆ ಸೂಚಿಸಿದ್ದಾರೆ. ಈ ಕುರಿತಾದ ಲೋಕಾಯುಕ್ತರ ನೋಟಿಸ್​ನ ಪ್ರತಿ ಇಲ್ಲಿದೆ.

Lokayukta case k s Eshwarappa family
Lokayukta case k s Eshwarappa family

Lokayukta case k s Eshwarappa family 03

Share This Article
Leave a Comment

Leave a Reply

Your email address will not be published. Required fields are marked *