ಭಾರಿ ಮಳೆ! ಬಿದನೂರು ಕೋಟೆಯಲ್ಲಿ ಧರೆ ಕುಸಿತ

ajjimane ganesh

land slide in Bidanur Fort ಶಿವಮೊಗ್ಗ, malenadu today news : August 18 2025: ಮಲೆನಾಡು ಶಿವಮೊಗ್ಗದಲ್ಲಿ ಮಳೆ ವಿಪರೀತವಾಗಿದೆ. ಇವತ್ತು ಸಹ ಬೆಳಗ್ಗೆಯಿಂದಲು ಮಳೆ ರಚ್ಚೆ ಹಿಡಿದಿದೆ. ಶಿವಮೊಗ್ಗ ನಗರದಲ್ಲಿ ವರ್ಷಧಾರೆ ಆರ್ಭಟಿಸುತ್ತಿದ್ದು, ಕಾಡು ಪ್ರದೇಶಗಳಲ್ಲಿ ದೋ ಎಂದು ಸುರಿಯುತ್ತಿದೆ. ಇದರ ನಡುವೆ ಮಳೆಯಿಂದಾಗಿ ಧರೆ ಕುಸಿತದ ಆತಂಕ ಸಹ ಎದುರಾಗಿದೆ. ಸಾಕ್ಷಿ ಎಂಬಂತೆ, ಹೊಸನಗರ ತಾಲ್ಲೂಕಿನಲ್ಲಿರುವ ಐತಿಹಾಸಿಕ ಬಿದನೂರು ಕೋಟೆಯ (Bidnur Fort) ಒಂದು ಭಾಗ ಕುಸಿದಿದೆ. 

Malenadu Today

- Advertisement -

ಕೋಟೆಯ ಮಹಾದ್ವಾರದಿಂದ ಒಳಗೆ ಪ್ರವೇಶಿಸುವ ಮಾರ್ಗದಲ್ಲಿ, ರಾಜದರ್ಬಾರ್ ಅಂಗಳಕ್ಕೆ ಹೋಗುವ ದಾರಿಯಲ್ಲಿ ಬಲಭಾಗದಲ್ಲಿದ್ದ ಕೊಳದ ದಂಡೆಯು ಕುಸಿದಿದೆ. ಈ ಘಟನೆಯ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಕೋಟೆಯನ್ನು ಉಳಿಸುಕೊಳ್ಳುವಂತೆ ಆಡಳಿತ ವ್ಯವಸ್ಥೆಯನ್ನು ಒತ್ತಾಯಿಸುತ್ತಿದ್ದಾರೆ.  

Malenadu Today

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

ಶುಭ ಸೋಮವಾರ! ಇವತ್ತಿನ ದಿನಭವಿಷ್ಯ ವಿಶೇಷ!? https://malenadutoday.com/monday-horoscope-special/

land slide in Bidanur Fort

Share This Article
Leave a Comment

Leave a Reply

Your email address will not be published. Required fields are marked *