ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14 2025: ಇಂದಿನ ಪಂಚಾಂಗ ಮತ್ತು ದೈನಂದಿನ ರಾಶಿ ಭವಿಷ್ಯ (Know Your Rashi Bhavishya): ಇಂದು ಮಂಗಳವಾರ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಪುನರ್ವಸು ನಕ್ಷತ್ರ, ಅಷ್ಟಮಿ ತಿಥಿ. ಇವತ್ತಿನ ರಾಹುಕಾಲ ಬೆಳಿಗ್ಗೆ 07:30 ರಿಂದ 09:00 ರವರೆಗೆ, ಯಮಗಂಡಕಾಲ ಬೆಳಿಗ್ಗೆ 10:30 ರಿಂದ 12:00 ರವರೆಗೆ ಮತ್ತು ಗುಳಿಕಕಾಲ ಮಧ್ಯಾಹ್ನ 01:30 ರಿಂದ 03:00 ರವರೆಗೆ ಇರುತ್ತದೆ.

ದೈನಂದಿನ ರಾಶಿ ಭವಿಷ್ಯ
ಮೇಷ : ಇಂದು ಹೊಸ ವಿಷಯ ಕಲಿಯುವಿರಿ, ಮಹತ್ವದ ಮಾಹಿತಿಯು ಲಭಿಸಲಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ದಿನವಿಡಿ ಸಂತೋಷವಿರಲಿದೆ. ಹೊಸ ವಾಹನ ಖರೀದಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೊಸ ಹುರುಪಿನಿಂದ ಮುನ್ನುಗ್ಗುವಿರಿ.
ವೃಷಭ: ಅನಗತ್ಯ ಸಾಲ ಮತ್ತು ಹಣಕಾಸಿನ ತೊಂದರೆ, ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ಪ್ರಯಾಣ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ವಾದ. ವ್ಯಾಪಾರ ಮತ್ತು ಉದ್ಯೋಗದ ನಿರೀಕ್ಷೆಗಳಲ್ಲಿ ಸ್ವಲ್ಪ ನಿರಾಸೆಯಾಗಬಹುದು
ಮಿಥುನ: ವೃತ್ತಿಪರ ಪ್ರಯತ್ನದಲ್ಲಿ ಸಕಾರಾತ್ಮಕ ಫಲಿತಾಂಶಗ. ವಾಹನ ಬಳಕೆಯಲ್ಲಿ ಎಚ್ಚರವಿರಲಿ. ಗೌರವ ಮತ್ತು ಖ್ಯಾತಿ ಹೆಚ್ಚಲಿದೆ. ಆಸ್ತಿ-ಸಂಬಂಧಿತ ವಿವಾದ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಕಿರಿಕಿರಿ ನಿವಾರಣೆಯಾಗಲಿದೆ.
ಕರ್ಕಾಟಕ: ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿರಾಶಾದಾಯಕವಾಗಿರಬಹುದು. ಖರ್ಚು ಹೆಚ್ಚಾಗಲಿದೆ, ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದ. ಆಲೋಚನೆಗಳಲ್ಲಿನ ಅಸ್ಥಿರತೆಯನ್ನು ನಿಯಂತ್ರಿಸಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ
ಸಿಂಹ: ಬಂಧುಗಳೊಂದಿಗಿನ ಸ್ನೇಹ ಸಂಬಂಧ ಬಲಗೊಳ್ಳುತ್ತವೆ. ಕೈಗೆತ್ತಿಕೊಂಡ ಕೆಲಸ ತ್ವರಿತವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಉತ್ತಮ ಸಮಯ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಭರವಸೆ ಮೂಡಲಿವೆ.

ಕನ್ಯಾ: ದೂರದ ಬಂಧುಗಳ ಭೇಟಿ , ಮನಸ್ಸಿಗೆ ಸಂತೋಷ ಸಿಗಲಿದೆ. ಅಸಾಧಾರಣ ಯಶಸ್ಸನ್ನು ಸಾಧಿಸುವಿರಿ. ಶುಭ ಸಮಾಚಾರ ಕೇಳಿ ಬರಲಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಹುರುಪು ನಿಮ್ಮದಾಗಲಿದೆ
ತುಲಾ : ಕೆಲವು ಪ್ರಮುಖ ಕಾರ್ಯಗಳು ಮುಂದೂಡಲ್ಪಡುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸ್ವಲ್ಪ ತೊಂದರೆ ಉಂಟುಮಾಡಬಹುದು. ದೂರ ಪ್ರಯಾಣ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ವಾದ-ವಿವಾದ. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಧಾನಗತಿಯ ಪ್ರಗತಿ
ವೃಶ್ಚಿಕ: ದೂರ ಪ್ರಯಾಣ. ಆರ್ಥಿಕ ಪರಿಸ್ಥಿತಿಯು ಇಂದು ಅನಿಶ್ಚಿತತೆಯಿಂದ ಕೂಡಿರುತ್ತದೆ. ಆರೋಗ್ಯದ ಕಡೆ ಗಮನ ನೀಡುವುದು ಉತ್ತಮ. ಉದ್ಯೋಗ ಮತ್ತು ವ್ಯವಹಾರದಲ್ಲಿನ ಪ್ರಗತಿ ನಿಧಾನಗತಿಯಲ್ಲಿ ಸಾಗಲಿದೆ. ಅನಗತ್ಯ ಖರ್ಚು
ಧನು: ಕೆಲಸದಲ್ಲಿ ಯಶಸ್ಸು ಖಚಿತ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ತ ಸಮಯ. ಗಣ್ಯ ವ್ಯಕ್ತಿಗಳ ಸಂಪರ್ಕ. ವಸ್ತುರೂಪದ ಲಾಭ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರೋತ್ಸಾಹ ಸಿಗಲಿದೆ
ಮಕರ : ಕೈಗೆತ್ತಿಕೊಂಡ ಕೆಲಸದಲ್ಲಿ ವಿಳಂಬ. ಆರ್ಥಿಕ ತೊಂದರೆ. ಜವಾಬ್ದಾರಿ ಹೆಚ್ಚಾಗುವುದರಿಂದ ಸ್ವಲ್ಪ ಒತ್ತಡ ಉಂಟಾಗಬಹುದು. ದೂರ ಪ್ರಯಾಣ. ಆಧ್ಯಾತ್ಮಿಕ ವಿಷಯಗಳಲ್ಲಿ ಸಮಸ್ಯೆಯಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ.
ಕುಂಭ : ಪ್ರಮುಖ ಕೆಲಸ ಮುಂದೂಡುವ ಪರಿಸ್ಥಿತಿ ಹಠಾತ್ ಪ್ರಯಾಣ. ಕೆಲಸದ ಸ್ಥಳದಲ್ಲಿ ಹೆಚ್ಚುವರಿ ಜವಾಬ್ದಾರಿ, ನಿಮ್ಮ ಮೇಲೆ ಬೀಳಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಬಹುದು.
ಮೀನ : ಶುಭ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಮತ್ತು ಅನುಕೂಲಕರ ಫಲಿತಾಂಶ. ಬಾಲ್ಯದ ಸ್ನೇಹಿತರೊಂದಿಗೆ ಮತ್ತೆ ಒಂದಾಗುವ ಸಂಭ್ರಮ. ಔತಣಕೂಟ ಮತ್ತು ಮನರಂಜನೆಯಲ್ಲಿ ಭಾಗವಹಿಸುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅತ್ಯಂತ ಉತ್ಸಾಹಭರಿತರಾಗಿ ಕಾರ್ಯನಿರ್ವಹಿಸುವಿರಿ.

Know Your Rashi Bhavishya & Panchangam Details
Todays Kannada Rashi Bhavishya, October 14 2025 Panchangam, Book Vehicle Yogas, Financial Prosperity Horoscope,annada Calendar Horoscope, ಇಂದಿನ ಜಾತಕ, ಕನ್ನಡ ರಾಶಿ ಭವಿಷ್ಯ, 14 ಅಕ್ಟೋಬರ್ 2025, ಪಂಚಾಂಗ, ಮಂಗಳವಾರ ಭವಿಷ್ಯ, ಅಡಿಕೆ, ಮಕರ ರಾಶಿ, ಮೇಷ ರಾಶಿ, ಸೂರ್ಯೋದಯ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!