SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 10, 2024 linganamakki dam water level

ಮಲೆನಾಡು ಶಿವಮೊಗ್ಗದಲ್ಲಿ ಕಾಳಿಂಗ ಸರ್ಪ ( king cobra ) ಕಾಣಿಸಿಕೊಳ್ಳುವುದು ಅಚ್ಚರಿಯ ವಿಷಯವಲ್ಲ. ಆದರೆ ಕಾಳಿಂಗ ಮನೆ ಬಾಗಿಲಿಲ್ಲಿಯೇ ಕಾಣಿಸಿಕೊಂಡರೇ ಭಯವಾಗುವುದಂತು ಕಂಡಿತ ಅಂತಹ ಎರಡು ಘಟನೆಗಳ ವಿವರ ಇಲ್ಲಿದೆ ನೋಡಿ..
ಮರವೇರಿ ಕುಳಿತ ಕಾಳಿಂಗ ಸರ್ಪ – king cobra
ಆಗುಂಬೆ ಮಳೆಕಾಡು ಅದ್ಯಯನ ಕೇಂದ್ರದ ಫೀಲ್ಡ್ ಡೈರಕ್ಟರ್ ಅಜಯ್ ಗಿರಿಯವರು ಕಾಳಿಂಗ ಸರ್ಪದ ಎರಡು ವಿಡಿಯೋಗಳನ್ನ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ಅವರು ನಡೆದ ಘಟನೆಯ ಸ್ಥಳದ ವಿವರಗಳನ್ನ ನೀಡಿಲ್ಲವಾದರೂ ಎರಡು ಬೇರೆ ಬೇರೆ ಘಟನೆಗಳ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ.
king cobra was sighted next to a house
ಇಲ್ಲಿನ ಮನೆಯೊಂಧರ ಸಮೀಪ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅದನ್ನ ನಾಯಿಗಳು ಕಂಡು ಬೊಗಳಲು ಆರಂಭಿಸಿವೆ. ಇದರಿಂದ ಹೆದರಿದ ಕಾಳಿಂಗ ಮರವೇರಿ ಕುಳಿತು ಬಿಟ್ಟಿತ್ತು. ಕಾಳಿಂಗ ಸರ್ಪವೊಂದು ಮರವೇರಿ ಬುಸುಗುಡುತ್ತಿದ್ದನ್ನ ಕಂಡ ಅಲ್ಲಿಯೇ ಇದ್ದ ಮನೆಯವರು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ (ARRS) ನವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದ ಅಜಯ್ ಗಿರಿ ನೇತೃತ್ವದ ತಂಡ ಕಾಳಿಂಗವನ್ನ ಸೇಫ್ ಆಗಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
View this post on Instagram
ಕಾರಿನ ಬ್ಯಾನೆಟ್ ನೊಳಗೆ ಠಿಕಾಣಿ ಹೂಡಿದ ಅಜಯ್ ಗಿರಿ- king cobra
ಇನ್ನೊಂದು ಘಟನೆಯಲ್ಲಿ ನಾಯಿಗಳಿಂದ ಬೆದರಿಸಲ್ಪಟ್ಟ 8 ಅಡಿ ಉದ್ದದ ಕಾಳಿಂಗ ಸರ್ಪವೊಂದು ಆನಂತರ ಎಲ್ಲಿಯು ಕಾಣಿಸಿರಲಿಲ್ಲ. ಇದು ಸ್ಥಳೀಯ ನಿವಾಸಿಗಳಿಗೆ ಅನುಮಾನಕ್ಕೆ ಕಾರಣವಾಗಿತ್ತು. ಹಾವು ಕಾರಿನೊಳಗೆ ಇರಬಹುದಾ ಎಂಬ ಸಂಶಯದಲ್ಲಿ ಪರಿಶೀಲಿಸಿದಾಗ ಕಾಳಿಂಗ ಅಲ್ಲಿಯೇ ಪಾರ್ಕ್ ಮಾಡಿದ್ದ ಕಾರೊಂದರಲ್ಲಿ ಇರುವುದು ಗೊತ್ತಾಗಿದೆ. ಹೀಗಾಗಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ (ARRS) ದವರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತಜ್ಞರ ತಂಡ ಕಾಳಿಂಗವನ್ನ ಸುರಕ್ಷಿತವಾಗಿ ಹಿಡಿದಿದ್ದಾರೆ. ಅಲ್ಲದೆ ಕಾಳಿಂಗ ಸರ್ಪದ ಸಂರಕ್ಷಣೆಯ ಬಗ್ಗೆ ಕರಪತ್ರಗಳನ್ನ ವಿತರಿಸಿ ಸ್ಥಳೀಯ ಪ್ರಾತಕ್ಷಿಕೆ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ.
View this post on Instagram
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ