Kantara kambala : ಕಾಂತಾರ ಚಿತ್ರದ ಪ್ರಸಿದ್ಧ ಕೋಣ ‘ಅಪ್ಪು’ ಇನ್ನಿಲ್ಲ
ಕಾಂತಾರ ಚಿತ್ರದ ಕಂಬಳದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದ ಎರಡು ಕೋಣಗಳಲ್ಲಿ ಅಪ್ಪು ಎಂಬ ಒಂದು ಕೋಣ ಇಂದು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದೆ.
ಕಾಂತಾರ ಚಿತ್ರವು ಬಿಡುಗಡೆಯಾದ ನಂತರ, ಸಿನಿಮಾದ ಕಂಬಳ ದೃಶ್ಯಗಳು ಮತ್ತು ಅದರಲ್ಲಿ ಭಾಗಿಯಾಗಿದ್ದ ಕೋಣಗಳು ಸಹ ಹೆಚ್ಚು ಗಮನ ಸೆಳೆದಿದ್ದವು. ರಿಷಬ್ ಶೆಟ್ಟಿ ಸಹ ಚಿತ್ರೀಕರಣಕ್ಕೆಂದು ಈ ಕೋಣಗಳನ್ನು ಓಡಿಸಲು ಕಂಬಳ ಓಡಿಸುವ ತರಬೇತಿಯನ್ನು ಸಹ ಪಡೆದಿದ್ದರು. ಅಪ್ಪು ಮತ್ತು ಕಾಲಾ ಎಂಬ ಹೆಸರಿನ ಈ ಎರಡು ಕೋಣಗಳು ಹಲವು ಕಂಬಳ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿ ಪ್ರಶಸ್ತಿಗಳನ್ನು ಗಳಿಸಿದ್ದವು.
ಬೈಂದೂರಿನ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಈ ಕೋಣಗಳನ್ನು ಮಕ್ಕಳಂತೆ ಪ್ರೀತಿಯಿಂದ ಸಾಕಿದ್ದರು. ಈಗ ಅಪ್ಪು ನಿಧನದಿಂದ ಅವರು ಮತ್ತು ಕಂಬಳ ಪ್ರಿಯರು ಕಂಬಳ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.
