ಬಹುನಿರೀಕ್ಷಿತ ‘ಕಾಂತಾರ ಪ್ರೀಕ್ವೆಲ್’ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ದೇಶದ 4ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ಟ್ರೈಲರ್ ಅನಾವರಣಗೊಂಡಿದೆ. ವಿಶೇಷವೆಂದರೆ, ಕನ್ನಡದಲ್ಲಿ ಕನ್ನಡಿಗರ ಕೈಯಲ್ಲಿಯೇ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಉಳಿದ ಭಾಷೆಗಳಲ್ಲಿ ಪ್ರಮುಖ ನಟರು ಬಿಡುಗಡೆ ಮಾಡಿದ್ದಾರೆ. ತೆಲುಗಿನಲ್ಲಿ ನಟ ಪ್ರಭಾಸ್, ತಮಿಳಿನಲ್ಲಿ ಶಿವಕಾರ್ತಿಕೇಯನ್, ಹಿಂದಿಯಲ್ಲಿ ಹೃತಿಕ್ ರೋಷನ್, ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ.
Kantara Chapter 1′ trailer, released ಟ್ರೈಲರ್‌ನಲ್ಲಿ ಏನಿದೆ
ಸುಮಾರು 2 ನಿಮಿಷ 57 ಸೆಕೆಂಡುಗಳಿರುವ ಈ ಟ್ರೈಲರ್, ‘ಶಿವ’ ಚಿಕ್ಕವನಾಗಿದ್ದಾಗ “ಅಪ್ಪಯ್ಯ ಇದೇ ಜಾಗದಲ್ಲಿ ಯಾಕೆ ಮಾಯವಾಗಿದ್ದು?” ಎಂಬ ಸಂಭಾಷಣೆಯೊಂದಿಗೆ ಆರಂಭವಾಗುತ್ತದೆ. ಟ್ರೈಲರ್‌ನಲ್ಲಿ ಕಾಡು ಜನರ ಜೀವನ, ಅವರ ಸಂಪ್ರದಾಯಗಳು ಮತ್ತು ಕುಲಕಸುಬುಗಳನ್ನು ಪರಿಚಯಿಸಲಾಗಿದೆ. ರಿಷಬ್ ಶೆಟ್ಟಿ ಅವರು ಕಾಡಿನ ಜನರ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟಿ ರುಕ್ಮಿಣಿ ವಸಂತ್ ರಾಜಕುಮಾರಿ ಪಾತ್ರದಲ್ಲಿ ಮಿಂಚಿದ್ದಾರೆ.
ಚಿತ್ರದಲ್ಲಿ ಕಾಡಿನ ರಾಜ ಮತ್ತು ಸಂಸ್ಥಾನದ ರಾಣಿಯ ನಡುವಿನ ಪ್ರೇಮ ಸಂಬಂಧ, ಕಾಡನ್ನು ಉಳಿಸಿಉಕೊಳ್ಳಲು ಕಾಡುಜನಗಳು ಹೋರಾಟ ರಿಷಬ್ ಶೆಟ್ಟಿಯವರ ಆಕರ್ಷಕ ಸಾಹಸ ದೃಶ್ಯಗಳು, ವೈಭವದ ಸೆಟ್‌ಗಳು ಮತ್ತು ನೂರಾರು ಕಲಾವಿದರನ್ನು ಅದ್ಧೂರಿಯಾಗಿ ತೋರಿಸಲಾಗಿದೆ. ‘ಕಾಂತಾರ’ ಚಿತ್ರದಲ್ಲಿ ಇದ್ದಂತಹ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿಯೂ ಇದ್ದಾರೆ.