Kachinakatte : ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

prathapa thirthahalli
Prathapa thirthahalli - content producer

Kachinakatte : ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಶಿವಮೊಗ್ಗ,  ಮಲೆನಾಡು ಶಿವಮೊಗ್ಗದಲ್ಲಿ ಪುಂಡರ ಹಾವಳಿ ಮುಂದುವರಿದಿದ್ದು, ಕಾಚಿನಕಟ್ಟೆಯ ಕೊರಳ್ಳಿ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಕೊರಳ್ಳಿ ಗ್ರಾಮದ ನಿವಾಸಿ ಓಂಕಾರಪ್ಪ ಅವರಿಗೆ ಸೇರಿದ ಸ್ಪೆಂಡರ್ ಪ್ಲಸ್ ಬೈಕ್‌ಗೆ ನಿನ್ನೆ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮನೆಯೊಳಗೆ ಬೆಳಕು ಕಂಡ ಓಂಕಾರಪ್ಪ ಅವರು ಹೊರಬಂದು ನೋಡಿದಾಗ ಬೈಕ್‌ಗೆ ಬೆಂಕಿ ಹತ್ತಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಮನೆಯವರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ. ಘಟನಾ  ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

- Advertisement -
ಬೆಂಕಿ ಕೊಟ್ಟ ಪರಿಣಾಮ ಸುಟ್ಟಿರುವ ಬೈಕ್​
ಬೆಂಕಿ ಕೊಟ್ಟ ಪರಿಣಾಮ ಸುಟ್ಟಿರುವ ಬೈಕ್​
TAGGED:
Share This Article
Leave a Comment

Leave a Reply

Your email address will not be published. Required fields are marked *