job news today / ಶಿವಮೊಗ್ಗ: ಬೆಂಗಳೂರಿನ ಮೆಟ್ರೊ ರೈಲು ಕಾರ್ಪೊರೇಷನ್‌ನಲ್ಲಿ 150 ಮೆಂಟೇನರ್ ಹುದ್ದೆಗಳಿಗಾಗಿ ಐ.ಟಿ.ಐ. ಅಥವಾ ಎನ್‌ಸಿವಿಟಿ/ ಎನ್‌ಸಿಟಿವಿಟಿ/ಎನ್‌ಎಸಿಗೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಹಾಗೂ 50 ವರ್ಷದೊಳಗಿನ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯು 5 ವರ್ಷಗಳಿಗೆ ಗುತ್ತಿಗೆ ಆಧಾರವಾಗಿದ್ದು, ನಂತರ ವೈಯಕ್ತಿಕ ಕಾರ್ಯಕ್ಷಮತೆಗೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು. ವೇತನ ₹ 25,000ದಿಂದ ₹ 59,060 (ವಾರ್ಷಿಕ ಬಡ್ತಿ ಶೇ 3) ಮತ್ತು ಬಿಎಂಆರ್‌ಸಿಎಲ್‌ನ ಒ ಅಂಡ್ ಎಂ ವಿಂಗ್‌ಗೆ ಲಭ್ಯವಿರುವ ಇತರೆ ಭತ್ಯೆಗಳನ್ನು ನೀಡಲಾಗುವುದು. ಆಸಕ್ತರು ಮೇ 22 ರೊಳಗಾಗಿ ಇಲಾಖೆಯ ವೆಬ್‌ಸೈಟ್ www.bmrc.co.in/careers ರಲ್ಲಿ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ helpdesk@bmrc.co.in ಅನ್ನು ಸಂಪರ್ಕಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ.ಸಿ.ಎ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

job news today / ಖಾಲಿ ಇರುವ ಉಪನ್ಯಾಸಕರು/ ಶಿಕ್ಷಕರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ/ಕಾಲೇಜು ಹಾಗೂ ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಉಪನ್ಯಾಸಕರು/ ಶಿಕ್ಷಕರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. (job news today ) ಇವರ ಅವಧಿ 1 ವರ್ಷದ್ದಾಗಿರುತ್ತದೆ. ವಸತಿ ಶಾಲೆ/ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ವಿವರ; ಕನ್ನಡ ಭಾಷಾ ಶಿಕ್ಷಕರು-7, ಇಂಗ್ಲಿಷ್ ಭಾಷಾ ಶಿಕ್ಷಕರು-9, ಹಿಂದಿ ಭಾಷಾ ಶಿಕ್ಷಕರು-4, ಉರ್ದು ಭಾಷಾ ಶಿಕ್ಷಕರು-2, ಗಣಿತ ಶಿಕ್ಷಕರು-4, ಸಾಮಾನ್ಯ ವಿಜ್ಞಾನ ಶಿಕ್ಷಕರು-4, ಸಮಾಜ ವಿಜ್ಞಾನ ಶಿಕ್ಷಕರು-8, ಕಂಪ್ಯೂಟರ್ ಶಿಕ್ಷಕರು-2, ದೈಹಿಕ ಶಿಕ್ಷಣ ಶಿಕ್ಷಕರು-2, ಒಟ್ಟು-42. ವಸತಿ ಶಾಲೆ/ಮೌಲಾನಾ ಆಜಾದ್ ಮಾದರಿ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ವಿವರ; ಕನ್ನಡ ಭಾಷಾ ಶಿಕ್ಷಕರು-3, ಇಂಗ್ಲಿಷ್ ಭಾಷಾ ಶಿಕ್ಷಕರು-3, ಉರ್ದು ಭಾಷಾ ಶಿಕ್ಷಕರು-3, ಗಣಿತ ಶಿಕ್ಷಕರು-3, ಭೌತ ವಿಜ್ಞಾನ ಉಪನ್ಯಾಸಕರು-3, ರಸಾಯನ ವಿಜ್ಞಾನ ಉಪನ್ಯಾಸಕರು-3, ಜೀವ ವಿಜ್ಞಾನ ಉಪನ್ಯಾಸಕರು-3, ವ್ಯವಹಾರ ಅಧ್ಯಯನ ಉಪನ್ಯಾಸಕರು-1, ಲೆಕ್ಕಶಾಸ್ತ್ರ ಉಪನ್ಯಾಸಕರು -2, ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರು-1, ಅರ್ಥಶಾಸ್ತ್ರ ಉಪನ್ಯಾಸಕರು-1, ಇತಿಹಾಸ ಉಪನ್ಯಾಸಕರು-1, ಒಟ್ಟು 27 ಉಪನ್ಯಾಸಕರು.
job news today /ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ ಹಾಗೂ ಎಲ್ಲಾ ತಾಲೂಕು ಮಾಹಿತಿ ಕೇಂದ್ರ ಕಚೇರಿಗಳಲ್ಲಿ ಅಥವಾ ವೆಬ್‌ಸೈಟ್ https://dom.karnataka.gov.in ರಿಂದ ಪಡೆದು, ಮೇ 19 ರೊಳಗಾಗಿ ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ -7676888388, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಸೊರಬ-9513815513, ಶಿಕಾರಿಪುರ-7829136724, ಹೊಸನಗರ-9008447029 ಹಾಗೂ ಸಾಗರ-7338222907 ಸಂಪರ್ಕಿಸಬಹುದು.
