SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 14, 2024
ಶಿವಮೊಗ್ಗ | ರಸ್ತೆ ಗುಂಡಿಗಳನ್ನು ಮುಚ್ಚಲು JNNCE | Jawaharlal Nehru New College of Engineering ವಿದ್ಯಾರ್ಥಿಗಳು ‘ಜೆ.ಎನ್.ಎನ್.ಸಿ.ಇ ಕೋಲ್ಡ್ ಪಾಟ್ ಹೋಲ್ ಮಿಕ್ಸ್’ ಎಂಬ ಪ್ರಾಡಕ್ಟ್ ರೆಡಿ ಮಾಡಿದ್ದಾರೆ. ಇದರಿಂದ ರಸ್ತೆ ಗುಂಡಿಗಳನ್ನ ಸುಲಭವಾಗಿ ಮುಚ್ಚಬಹುದು ಎಂದು ಡೆಮೋ ಮಾಡಿ ವಿದ್ಯಾರ್ಥಿಗಳು ತೋರಿಸಿದ್ದಾರೆ.
ಸಾಮಾನ್ಯವಾಗಿ ರಸ್ತೆ ಗುಂಡಿಗಳನ್ನ ಜಲ್ಲಿ, ಡಾಂಬರ್ ಮಿಶ್ರಣವನ್ನ ಬಳಸಿ ಮುಚ್ಚಲಾಗುತ್ತದೆ. ಇದನ್ನು ಹಾಟ್ ಮಿಕ್ಸ್ ಎನ್ನುತ್ತಾರೆ. ಸದ್ಯ JNNCE ವಿದ್ಯಾರ್ಥಿಗಳು ಡಾಂಬರ್ ಅಲ್ಲದ ಕೋಲ್ಡ್ ಪ್ಯಾಚ್ ಮಿಶ್ರಣವನ್ನ ತಯಾರು ಮಾಡಿದ್ದಾರೆ. ಇದರಿಂದ ರಸ್ತೆಗುಂಡಿಗಳನ್ನ ಈಸಿಯಾಗಿ ಮುಚ್ಚಬಹುದಷ್ಟೆ ಅಲ್ಲದೆ ಎಲ್ಲಾ ಕಾಲದಲ್ಲಿಯು ಇದನ್ನ ಬಳಸಬಹುದಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು

ಕೋಲ್ಡ್ ಮಿಕ್ಸ್ ಹೇಗೆ ವಿಭಿನ್ನ:
1. ಹಾಟ್ ಮಿಕ್ಸ್ ಗಳನ್ನು ಮಳೆಗಾಲ ಹೊರತಾದ ಕಾಲಾವಧಿಯಲ್ಲಿ ಬಳಸಬಹುದು, ಆದರೆ, ಈ ಕೋಲ್ಡ್ ಮಿಕ್ಸ್ ಯಾವುದೇ ಕಾಲದಲ್ಲಿ ಬೇಕಾದರೂ ಬಳಸಬಹುದು.
2. ಬೇರೆಯ ಕಂಪೆನಿಗಳಲ್ಲಿ ಲಭ್ಯವಿರುವ ಕೋಲ್ಡ್ ಮಿಕ್ಸ್ ಮಾದರಿಯ ಪರಿಕರಗಳು 50 ಕೆಜಿಗೆ 1700 ರೂ. ಇದೆ. ಆದರೆ, JNNCE ವಿದ್ಯಾರ್ಥಿಗಳು ತಯಾರಿಸಿರುವ ಕೋಲ್ಡ್ ಪ್ಯಾಚ್‌ಗೆ ಕೇವಲ 500 ರೂಪಾಯಿ ವೆಚ್ಚವಾಗಲಿದೆ.
3. ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಕಾಲ ಬಾಳಿಕೆ ಬರುವಂತೆ ಗುಂಡಿ ಮುಚ್ಚಬಹುದು.
4. ಹಾಟ್ ಮಿಕ್ಸ್ ಬಳಸಿ ಗುಂಡಿ ಮುಚ್ಚಲು ಬೇಕಾಗುವಂತೆ ಹೆಚ್ಚು ಮಾನವ ಕಾರ್ಮಿಕರು, ಇತರೆ ಮಿಷನ್ ಗಳು ಇದಕ್ಕೆ ಬೇಕಾಗಿಲ್ಲ.
SUMMARY| JNNCE, to close potholes Students of Jawaharlal Nehru New College of Engineering have come up with a product called ‘JNNCE Cold Pot Hole Mix’.
KEYWORDS | JNNCE, close potholes , Students of Jawaharlal Nehru New College of Engineering , JNNCE Cold Pot Hole Mix,